

ಮೈಸೂರು: ಮೈಸೂರು ಅಥ್ಲೆಟಿಕ್ಸ್ ಕ್ಲಬ್ ವತಿಯಿಂದ 2022-23 ಮತ್ತು 2023-24ನೇ ಸಾಲಿನ ಶಾಲಾ ಕಾಲೇಜು ಹಾಗೂ ವಿಶ್ವವಿದ್ಯಾಲಯ ಹಂತದ ಅಥ್ಲೆಟಿಕ್ಸ್‌ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಮೈಸೂರು ಜಿಲ್ಲಾ ಅಥ್ಲಿಟ್‌ಗಳಿಗೆ ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರ ಹಾಗೂ ಪಾರಿತೋಷಕವನ್ನು ನೀಡಿ ಸನ್ಮಾನಿಸಲು ಅರ್ಜಿ ಆಹ್ವಾನಿಸಿದೆ.
ಜತೆಗೆ ಅತ್ಯುತ್ತಮ ಸಾಧನೆ ಮಾಡಿದ ಅಥ್ಲಿಟ್‌ಗೆ ‘ವರ್ಷದ ಅತ್ಯುತ್ತಮ ಅಥ್ಲಿಟ್’ ಹಾಗೂ ಅತ್ಯುತ್ತಮ ಪತ್ರಿಕಾ ಕ್ರೀಡಾ ವರದಿಗಾರ, ಅತ್ಯುತ್ತಮ ಪತ್ರಿಕಾ ಕ್ರೀಡಾ ಛಾಯಾಗ್ರಾಹಕ ಪುರಸ್ಕಾರ ನೀಡಲು ಸಂಸ್ಥೆ ನಿರ್ಧರಿಸಿದೆ.
2022ರ ಏಪ್ರಿಲ್‌ನಿಂದ 2024ರ ಮಾರ್ಚ್‌ವರೆಗೆ ನಡೆದ ಅಥ್ಲೆಟಿಕ್ಸ್ ಕ್ರೀಡಾಕೂಟಗಳಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಮೈಸೂರು ಜಿಲ್ಲೆಯ ಶಾಲಾ, ಪದವಿ ಪೂರ್ವ ಕಾಲೇಜು, ಮೈಸೂರು ವಿವಿಯ ಅಥ್ಲಿಟ್‌ಗಳು ಭಾವಚಿತ್ರವುಳ್ಳ ಸ್ವವಿವರ ಹಾಗೂ ಪ್ರತಿನಿಧಿ ದೃಢೀಕೃತ ದಾಖಲೆಗಳೊಂದಿಗೆ ಕ್ಲಬ್ ಕಚೇರಿಯ ವಿಳಾಸ(ನಂ.2011, ಸೀಬಯ್ಯ ರಸ್ತೆ, ದೇವರಾಜ ಮೊಹಲ್ಲಾ, ಮೈಸೂರು-57000)ದಲ್ಲಿ ಅರ್ಜಿ ಸಲ್ಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ಕ್ಲಬ್‌ನ ಕಾರ್ಯದರ್ಶಿ ಎಂ.ಯೋಗೇಂದ್ರ(ಮೊ.9448046667), ಜಿ.ಆರ್.ಪ್ರಭಾಕರ್(ಮೊ.:9751971978) ಅವರನ್ನು ಸಂಪರ್ಕಿಸಲು ಕೋರಲಾಗಿದೆ.