

ಚಿತ್ರದುರ್ಗ:ನಗರದ ಬಸವೇಶ್ವರ ವೈದ್ಯಕೀಯ ಕಾಲೇಜು ಪ್ರಾಧ್ಯಾಪಕ ಡಾ.ಎನ್.ಬಿ.ಪ್ರಹ್ಲಾದ್ ಅವರಿಗೆ ಈಚೆಗೆ ಹೊಸದಿಲ್ಲಿಯಲ್ಲಿ ನ ಡೆದ ಸಮಾರಂಭದಲ್ಲಿ ಕೇಂದ್ರದ ಕೌನ್ಸಿಲ್ ಆಫ್ ಸ್ಟೇಟ್‌ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಆ್ಯಂಡ್ ಇನ್‌ವೆಸ್ಟ್ ಮೆಂಟ್ ಕಾರ್ಪೋರೇಷ ನ್ ಆಫ್ ಇಂಡಿಯಾದಿಂದ ಅತ್ಯುತ್ತಮ ಉದ್ಯಮಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ವೈದ್ಯ ಕೀಯ ಪ್ರವಾಸೋದ್ಯ ಅಭಿವೃದ್ಧಿ,ಕಿವಿ,ಮೂಗು,ಗಂಟಲು ಶಸ್ತ್ರ ಚಿಕಿತ್ಸೆ,ಶಿಕ್ಷಣ,ತರಬೇತಿ ಇತ್ಯಾದಿ ಕಾರ‌್ಯಗಳಲ್ಲಿ ಪ್ರಹ್ಲಾದ್ ಅವರ ಸೇವೆ ಗು ರುತಿಸಿ ಅವರನ್ನು ಗೌರವಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.