ಅತ್ಯಾಚಾರ ನಡೆಸಿ ಕೊಲೆ ನಡೆಸಿದ ಐವರು ಶಂಕಿತ ಆರೋಪಿಗಳು ವಶಕ್ಕೆ

Published on

ಮಂಗಳೂರು: ನಗರದ ಹೊರ ವಲಯದ ಕಣಂತೂರು ಬೆಳ್ಳೇರಿ ಎಂಬಲ್ಲಿ 50 ವರ್ಷದ ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಪ್ರಕರಣದ ಐವರು ಶಂಕಿತ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮಹಿಳೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಸೆ.25 ರಂದು ಪತ್ತೆಯಾಗಿತ್ತು. ಮನೆಯೊಳಗೆ ಬೆಂಕಿ ಹಾಕಿ ಸುಡಲು ಪ್ರಯತ್ನಿಸಿರುವುದು ಕಂಡು ಬಂದಿತ್ತು. ಮಹಿಳೆಯ ಚಿನ್ನಾಭರಣ ಕಳವು ಮಾಡಲಾಗಿತ್ತು. ಕೊಲೆ ನಡೆದು ಮೂರು ದಿನಗಳ ಬಳಿಕ ಗಮನಕ್ಕೆ ಬಂದಿತ್ತು.

ಮಂಗಳೂರು ದಕ್ಷಿಣ ಎಸಿಪಿ ನೇತೃತ್ವದಲ್ಲಿ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಹಲವು ಮಂದಿಯನ್ನು ವಿಚಾರಣೆ ನಡೆಸಿತ್ತು.ಆದರೆ ಆರೋಪಿಗಳ ಪತ್ತೆ ಸಾಧ್ಯವಾಗಿರಲಿಲ್ಲ. ಸಾಕ್ಷ್ಯ ನಾಶ ಮಾಡಿದ ಕಾರಣ ಬೆರಳಚ್ಚು ತಜ್ಞರಿಗೂ ಸಾಕ್ಷ್ಯ ಸಂಗ್ರಹ ಸವಾಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net