

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿoದ 2025-26ನೇ ಸಾಲಿನಿಂದ ಡಿ. ದೇವರಾಜ ಅರಸು ವಸತಿ ಶಾಲೆಯು ಮೈಸೂರು ಜಿಲ್ಲಾ ನಂಜನಗೂಡು ತಾಲ್ಲೂಕು ಹದಿನಾರು ಗ್ರಾಮಾದಲ್ಲಿ ಪ್ರಾರಂಭವಾಗಿದ್ದು, ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಖಾಯಂ ನೇಮಕಾತಿ ನೌಕರರು ನೇಮಕಾತಿಯಾಗುವವರೆಗೆ ಕನ್ನಡ ಭಾಷಾ ಶಿಕ್ಷಕರು, ಆಂಗ್ಲ ಭಾಷಾ ಶಿಕ್ಷಕರು, ಹಿಂದಿ ಭಾಷಾ ಶಿಕ್ಷಕರು, ಗಣಿತ ಶಿಕ್ಷಕರು ಮತ್ತು ಸಮಾಜ ವಿಜ್ಞಾನ ಶಿಕ್ಷಕರ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 05 ಕೊನೆಯ ದಿನಾಂಕವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹದಿನಾರು ಡಿ. ದೇವರಾಜ ಅರಸು ವಸತಿ ಶಾಲೆಯ ಪ್ರಾಂಶುಪಾಲರ ದೂ.ಸಂ: 9019454615 ನ್ನು ಸಂಪರ್ಕಿಸಬಹುದು ಎಂದು ಡಿ.ದೇವರಾಜ ಅರಸು ವಸತಿ ಶಾಲೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.