ಅಣೆಕಟ್ಟು ಮಟ್ಟ ಮೀರಿ ಹರಿಯುತ್ತಿದೆ ಶಾಂಭವಿ ನದಿ

dam
Published on

ಬೆಳ್ಮಣ್: ಕಳೆದ ಮೂರು ನಾಲ್ಕು ದಿನಗಳಿಂದ ಧಾರಕಾರವಾಗಿ ಕಾರ್ಕಳ ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ರೈತಾಪಿ ವರ್ಗ ಸಂಪೂರ್ಣ ಕಂಗಾಲಾಗಿದ್ದು, ನದಿಗಳು ಅಣೆಕಟ್ಟಿನ ಮಟ್ಟ ಮೀರಿ ಹರಿಯುತ್ತಿದೆ. ನದಿ ತೀರದ ಹಲವಾರು ಕೃಷಿ ಭೂಮಿಗಳು ಜಲಾವೃತಗೊಂಡಿದ್ದು ಕೃಷಿ ಭೂಮಿಗೆ ಅಪಾರ ಹಾನಿಯುಂಟಾಗಿದೆ.

ಶಾಂಭವಿ ನದಿಯೂ ತುಂಬಿ ಹರಿಯುತ್ತಿದ್ದು ನಿಟ್ಟೆ, ಬೋಳ, ಸಚ್ಚೇರಿಪೇಟೆ, ಕಡಂದಲೆ ಸಹಿತ ಮುಂಡ್ಕೂರು ಸಂಕಲಕರಿಯದ ಅಣೆಕಟ್ಟುಗಳು ತುಂಬಿ ಹರಿಯುತ್ತಿದೆ. ಕೆಲವೊಂದು ಭಾಗದಲ್ಲಿ ಅಣೆಕಟ್ಟಿನ ಹಲಗೆಗಳನ್ನು ತೆಗೆಯಲಾಗಿದೆ. ನದಿ ತುಂಬಿ ಹರಿಯುವ ನಡುವೆಯೂ ಸಂಕಲಕರಿಯದ ಕೃಷಿಕ ಸುಧಾಕರ ಸಾಲ್ಯಾನ್ ಅಣೆಕಟ್ಟಿನ ಹಲಗೆಯನ್ನು ತೆಗೆದು ನೀರು ಹರಿಯಲು ವ್ಯವಸ್ಥೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net