ಅಡುಗೆ ಅನಿಲ ಬಳಕೆ ಸುರತೆ, ಜಾಗೃತಿ ತರಬೇತಿ

Enroll in Onion Crop Insurance Scheme
Published on

ವಿಜಯಪುರ : ಇಲ್ಲಿನ ಕೀರ್ತಿ ನಗರದ ದರಬಾರ ಸಮೂಹ ಶಿಕ್ಷಣ ಸಂಸ್ಥೆಯ ಶಮ್ಸ್​ ಶಾಲೆಯಲ್ಲಿ ಮಂಗಳವಾರ ನಮ್ಮ ಅಡುಗೆ ನಮ್ಮ ಜವಾಬ್ದಾರಿ ಶೀರ್ಷಿಕೆಯಡಿ ಅಡುಗೆ ಅನಿಲ ಸುರಾ ಕ್ರಮಗಳ ಬಗ್ಗೆ ಜಾಗೃತಿ ಅಭಿಯಾನ ನಡೆಯಿತು.

ನಗರದ ಇಂದಿರಾ ಭಾರತ ಗ್ಯಾಸ್​ ವಿತರಕ ವಿಲಾಸ ವ್ಯಾಸ ಮತ್ತು ವಿಜಯಾಂಬ ಭಾರತ ಗ್ಯಾಸ್​ ವಿತರಕರಾದ ಸಚಿನ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಭಾರತ ಗ್ಯಾಸ್​ ಕಂಪನಿಯ ರಾಜ್ಯದ ವ್ಯಾಪಾರ ಅಧಿಕಾರಿ ಆಶೀಶ ಅಗರವಾಲ್​ ಅಡುಗೆ ಅನಿಲ ಬಳಕೆಯ ಸುರತೆ ಕುರಿತು ಮಾತನಾಡಿ, ವಿತರಣೆ ಸಮಯದಲ್ಲಿ ಸಿಲಿಂಡರ್​ ಪರೀಕ್ಷಿಸಿ ಪಡೆಯಬೇಕು.

ಸ್ಟೋವ್​ ಅನ್ನು ಸಿಲಿಂಡರ್​ಗಿಂತ ಎತ್ತರಕ್ಕೆ ಇಡುವುದು, ಅಡುಗೆ ನಂತರ ರೆಗ್ಯುಲೆಟರ್​ ಬಂದ್​ ಮಾಡುವುದು, ಲೀಕೆಜ್​ ಬಗ್ಗೆ ಎಚ್ಚರಿಕೆ ಹಾಗೂ ಜಾಗೃತಿ ವಹಿಸುವುದು ಸೇರಿ ಮತ್ತಿತರರ ಸುರಕ್ಷತಾ ಕ್ರಮಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮದ ಕೊನೆಗೆ ಮಕ್ಕಳಿಗೆ ರಸಪ್ರಶ್ನೆ ನಡೆಸಿ, ಸರಿ ಉತ್ತರ ಕೊಟ್ಟ 15 ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net