

ಲಿಂಗದಹಳ್ಳಿ: ತರೀಕೆರೆ-ಚಿಕ್ಕಮಗಳೂರು ಮುಖ್ಯ ರಸ್ತೆಯಲ್ಲಿರುವ ದೋರನಾಳು, ಬೈರಾಪುರ ಹಾಗೂ ಸುತ್ತಮುತ್ತಲ ಗ್ರಾಮಗಳ ಭಾಗದ ಅಡಕೆ ಬೆಳೆಗಾರರು ಅಡಕೆ ಸಂಸ್ಕರಿಸಿದ ನಂತರ ಉಳಿಯುವ ಸಿಪ್ಪೆಯನ್ನು ಮುಖ್ಯರಸ್ತೆಯ ಎರಡೂ ಬದಿಗಳಲ್ಲೂ ಸುರಿಯುತ್ತಿರುವುದರಿಂದ ವಾಹನ ಸಂಚಾರ ದುಸ್ತರವಾಗಿದೆ.
ವಾಹನ ಚಾಲಕರು ಅದರಲ್ಲೂ ದ್ವಿಚಕ್ರ ವಾಹನ ಸವಾರರು ಅಡಕೆ ಸಿಪ್ಪೆ ಮೇಲೆ ವಾಹನಗಳನ್ನು ಚಲಾಯಿಸುವ ಸಂದರ್ಭದಲ್ಲಿ ಆಯತಪ್ಪಿ ಬೀಳುತ್ತಿರುವುರಿಂದ ಹಲವರು ಗಾಯಗೊಂಡಿದ್ದಾರೆ. ಸಂಬಂಧಪಟ್ಟ ಇಲಾಖೆ ಇತ್ತ ಗಮನಹರಿಸಿ ಅಡಕೆ ಸಿಪ್ಪೆಯನ್ನು ರಸ್ತೆ ಬದಿಗಳಲ್ಲಿ ಸುರಿಯದಂತೆ ತಡೆಗಟ್ಟಬೇಕಾಗಿದೆ.
ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಗಣಪತಿ ಮೂರ್ತಿಗಳನ್ನು ತರಲೆಂದು ಲಿಂಗದಹಳ್ಳಿಯಿಂದ ತರೀಕೆರೆಗೆ ಹೋಗುತ್ತಿದ್ದ ವಾಹನ ಚಾಲಕ ಅಡಕೆ ಸಿಪ್ಪೆ ಮೇಲೆ ಸಾಗುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಕಾರಣ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಘಟನೆಯಿಂದಲೂ ಅಡಕೆ ಬೆಳೆಗಾರರು ಎಚ್ಚೆತ್ತುಕೊಂಡಿಲ್ಲ. ಅಡಕೆ ಸಿಪ್ಪೆಯನ್ನು ರಸ್ತೆ ಬದಿಗೆ ತಂದು ಹಾಕುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಿದೆ.
02 ಎಲ್.ಡಿ.ಹೆಚ್ 02: ದೋರನಾಳು, ಭೈರಾಪುರ ಗ್ರಾಮಗಳ ಬಳಿ ಅಡಕೆ ಸಿಪ್ಪೆಯನ್ನು ರಸ್ತೆ ಬದಿ ಸುರಿದು ಬೆಂಕಿ ಹಚ್ಚಿರುವುದು.
02 ಎಲ್.ಡಿ.ಹೆಚ್. 02ಎ: ಕಿಸಾನ್ ಸಂಘದ ಕಾರ್ಯಕಾರಣಿ ಸದಸ್ಯ ಪರಮೇಶ್ವರಪ್ಪ
02 ಎಲ್.ಡಿ.ಹೆಚ್. 2ಬಿ : ಸುಣ್ಣದಹಳ್ಳಿ ಗ್ರಾಪಂನ ಮಾಜಿ ಸದಸ್ಯ ತಿಪ್ಪೇಶ್