

ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರದ 2024-25ನೇ ಸಾಲಿನ ವಿದ್ಯಾರ್ಥಿಗಳು ಅಭಿನಯದ ಗಿರೀಶ್ ಕಾರ್ನಾಡರ ರಚನೆಯ ‘ಅಗ್ನಿ ಮತ್ತು ಮಳೆ’ ನಾಟಕ ಪ್ರದರ್ಶನವನ್ನು ಡಿ.1 ರಂದು ಸಂಜೆ 6.30ಕ್ಕೆ ಭೂಮಿಗೀತ ರಂಗವೇದಿಕೆಯಲ್ಲಿ ಆಯೋಜಿಸಲಾಗಿದೆ.
ಸಾಲಿಯಾನ ಉಮೇಶ್ ನಾರಾಯಣ ಅವರು ನಾಟಕವನ್ನು ನಿರ್ದೇಶಿಸಿದ್ದು, ದಿಗ್ವಿಜಯ ಹೆಗ್ಗೋಡು ಅವರು ನಾಟಕಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.