ಅಖಂಡ ಕರ್ನಾಟಕ ರಕ್ಷಣಾ ಸೇವಾದಳದಿಂದ ಪ್ರತಿಭಟನೆ

11 KRN-2
?????????????????????????????????????????????????????????????????????????????????????????????????????????????????????????????????
Published on

ಕೆ.ಆರ್.ನಗರ: ಸಾಲದ ಕಂತು ಕಟ್ಟಲು ಮೈಕ್ರೋ ಫೈನಾನ್ಸ್ ಕಂಪನಿಯವರಿಂದ ಮೂರು ತಿಂಗಳ ಕಾಲವಕಾಶ ಕೊಡಿಸಬೇಕೆಂದು ಒತ್ತಾಯಿಸಿ ಅಖಂಡ ಕರ್ನಾಟಕ ರಕ್ಷಣಾ ಸೇವಾದಳ ವತಿಯಿಂದ ತಹಸೀಲ್ದಾರ್ ಎಂ.ಮಂಜುಳಾ ಅವರಿಗೆ ಮನವಿ ಸಲ್ಲಿಸಲಾಯಿತು.

ಸೇವಾದಳದ ಸಂಸ್ಥಾಪಕ ರಾಜ್ಯಾಧ್ಯಕ್ಷ ಸಿಂಹ ಶಿವುಗೌಡ ಮಾತನಾಡಿ, ಕೆಲ ಫೈನಾನ್ಸ್‌ಗಳ ಮುಖ್ಯಸ್ಥರು ತಾವು ಕೊಟ್ಟ ಸಾಲವನ್ನು ಪ್ರತಿ ತಿಂಗಳು ಕಟ್ಟಲೇಬೇಕು ಎಂದು ಹೇಳಿ ಸಾಲಗಾರರ ಮನೆ ಬಳಿ ಗಲಾಟೆ ಮಾಡುತ್ತಿದ್ದಾರೆ. ಕಂತು ಕಟ್ಟದಿದ್ದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಎಂದು ಆರೋಪಿಸಿದರು.

ಕೂಡಲೇ ಕಂಪನಿಗಳ ಜತೆ ತಹಸೀಲ್ದಾರ್ ಮಾತನಾಡಿ 3 ತಿಂಗಳ ಕಾಲಾವಕಾಶ ಕೊಡಿಸಬೇಕು. ಜತೆಗೆ ಸರ್ಕಾರ ಮಧ್ಯೆ ಪ್ರವೇಶ ಮಾಡಿ ಸಾಲ ವಸೂಲಿ ಮಾಡದಂತೆ ಸೂಕ್ತ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು.

ಸೇವಾದಳದ ತಾಲೂಕು ಘಟಕದ ಅಧ್ಯಕ್ಷ ಮಂಜುಗೌಡ, ಮಹಿಳಾ ಘಟಕದ ಅಧ್ಯಕ್ಷೆ ಚಂಪಕಾ, ಮಹಿಳಾ ಸಂಘಟನೆಗಳ ಸದಸ್ಯ ರಾದ ಕುಮಾರಿ, ಮಣಿಯಮ್ಮ, ಪ್ರೇಮಾ, ಜಯಂತಿ, ನಂದಿನಿ, ಅಂಜಲಿ, ಅನುಪಮ, ಮಂಗಳಾ, ಗೀತಾಬಾಯಿ, ಮೀನಾಕ್ಷಿ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net