

ಚನ್ನಪಟ್ಟಣ: ಎಲ್ಲಾ ಕಡೆಯಲ್ಲೂ ಕ್ರಿಮಿನಲ್ಸ್ಗಳು ಇರುತ್ತಾರೆ. ಅವರನ್ನು ಹುಡುಕಿ ಶಿೆ ಕೊಡುವ ಕೆಲಸವಾಗಬೇಕಷ್ಟೆ. ತಾಲೂಕಿನಲ್ಲಿ ನಡೆದಿರುವ ಭೂ ಹಗರಣದ ಹಿಂದೆ ಇಲಾಖೆಯಲ್ಲಿ ಯಾರೇ ಇದ್ದರೂ ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ, ಇದು ತಾಲೂಕಿನಲ್ಲಿ ಬೆಳಕಿಗೆ ಬಂದಿರುವ ಬಹುಕೋಟಿ ಭೂ ಹಗರಣದ ಬಗ್ಗೆ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರ ಖಡಕ್ ನುಡಿ.
ತಾಲೂಕು ಕಚೇರಿಗೆ ಬುಧವಾರ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಇದರಲ್ಲಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಯಾರೇ ಇದ್ದರೂ ಸುಮ್ಮನೆ ಬಿಡಲ್ಲ. ಹಗರಣದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಪಾತ್ರದ ಕುರಿತು ಪೊಲೀಸರು ಈಗಾಗಲೇ ತನಿಖೆ ನಡೆಸುತ್ತಿದ್ದಾರೆ. ಇಲಾಖೆಯಿಂದಲೂ ಆಂತರಿಕ ತನಿಖೆಗೆ ಆದೇಶಿಸಲಾಗಿದ್ದು, ತಪು$್ಪ ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಕರಣದ ಕುರಿತು ಸಮಗ್ರ ತನಿಖೆಯ ಅಗತ್ಯವಿದೆ. ಪ್ರಕರಣದ ಮೂಲ ಹುಡುಕುವುದು ಅಗತ್ಯವಿದೆ. ಇದು ಹೇಗಾಯಿತು ಎಂಬುದರ ಜತೆಗೆ ಮುಂದೆ ಹೀಗಾಗದಂತೆ ಕ್ರಮ ಕೈಗೊಳ್ಳುವುದು ಮುಖ್ಯವಾಗಿದೆ. ಸಂಪೂರ್ಣ ತನಿಖೆಯ ನಂತರವಷ್ಟೇ ಸತ್ಯಾಂಶ ಹೊರಬೀರಲಿದೆ ಎಂದರು.
ಈ ಹಿಂದೆ 2019ರಲ್ಲಿ ಇದೇ ರೀತಿ ಹಗರಣ ನಡೆದು ಪ್ರಕರಣ ದಾಖಲಾಗಿದ್ದರೂ ಪ್ರಕರಣ ಪ್ರಗತಿ ಕಾಣದ ಬಗ್ಗೆ ಉತ್ತರಿಸಿದ ಅವರು, ಈ ಹಿಂದೆ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಿಯಾದ ಮಾಹಿತಿ ಇಲ್ಲ. ಆ ಪ್ರಕರಣದ ತನಿಖೆಗೆ ಪೊಲೀಸ್ ಇಲಾಖೆಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಪೊಲೀಸ್ ಇಲಾಖೆ ಕೇಳಿದರೆ ನಮ್ಮಲ್ಲಿ ಲಭ್ಯವಿರುವ ಎಲ್ಲ ಮಾಹಿತಿಗಳನ್ನು ನೀಡಲು ಸಿದ್ಧರಿದ್ದೇವೆ. ಇಲ್ಲದ ಮಾಹಿತಿ ಕೇಳಿದರೆ ಕೊಡಲು ಆಗುವುದಿಲ್ಲ. ಈ ಪ್ರಕರಣದ ಕುರಿತು ಎಸ್ಪಿ ಜತೆ ಚರ್ಚೆ ನಡೆಸಲಾಗುವುದು ಎಂದು ಅವಿನಾಶ್ ಮೆನನ್ ರಾಜೇಂದ್ರನ್ ತಿಳಿಸಿದರು.
ಜನಸ್ನೇಹಿ ಕಚೇರಿಗಳು
ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಸಹ ಯಾವುದೇ ಕೆಲಸವಿದ್ದರೂ ಮಧ್ಯವರ್ತಿಗಳ ಮೊರೆ ಹೋಗದೆ ನೇರವಾಗಿ ಕಚೇರಿ ಅಧಿಕಾರಿಗಳನ್ನು ಸಂಪರ್ಕಿಸಬೇಕು. ಆಗ ಮಾತ್ರ ಮಧ್ಯವರ್ತಿಗಳಿಗೆ ಕಡಿವಾಣ ಬೀಳಲಿದೆ. ಕಚೇರಿಗಳು ಜನಸ್ನೇಹಿಯಾಗುವಂಥ ವ್ಯವಸ್ಥೆ ನಿಮಾರ್ಣ ಮಾಡಲಾಗುವುದು ಎಂದು ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಭರವಸೆ ನೀಡಿದರು. ಸರ್ಕಾರದ ಆದೇಶದಂತೆ ಇಂದು ತಾಲೂಕಿಗೆ ಭೇಟಿ ನೀಡಿದ್ದೇನೆ. ಕಂದಾಯ ಹಾಗೂ ಸರ್ವೇ ಸೇರಿ ಯಾವುದೇ ಇಲಾಖೆ ಸಮಸ್ಯೆ ಇದ್ದರೂ ಹಂತಹಂತವಾಗಿ ಪರಿಹರಿಸಲಾಗುವುದು ಎಂದು ತಿಳಿಸಿದರು.
ತಹಸೀಲ್ದಾರ್ ಹರ್ಷವರ್ಧನ್, ತಾಪಂ ಇಒ ಚಂದ್ರು, ಪೌರಾಯುಕ್ತ ಶಿವನಂಕಾರಿಗೌಡ, ಗ್ರೇಡ್ 2 ತಹಸೀಲ್ದಾರ್ ಲಕ್ಷಿ$್ಮದೇವಿ, ಕಂದಾಯ ಹಾಗೂ ಇತರ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಗಿಡನೆಟ್ಟು ಅಹವಾಲು ಸ್ವೀಕಾರ: ಜಿಲ್ಲಾಧಿಕಾರಿಯಾಗಿ ನಿಯೋಜನೆಗೊಂಡ ನಂತರ ಮೊದಲ ಬಾರಿಗೆ ತಾಲೂಕು ಕಚೇರಿಗೆ ಆಗಮಿಸಿದ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಕಚೇರಿ ಆವರಣದಲ್ಲಿ ಗಿಡನೆಟ್ಟರು. ನಂತರ, ತಾಲೂಕು ಕಚೇರಿಯ ಎದುರು ಸಾಗುವಳಿ ವಿಚಾರವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರ ಅಹವಾಲು ಸ್ವೀಕರಿಸಿದರು. ಸಮಸ್ಯೆ ಬಗೆಹರಿಸಲು ಸಮಯಾವಕಾಶ ಬೇಕಿದೆ. ಈ ಕಾರಣದಿಂದ ಪ್ರತಿಭಟನೆ ಹಿಂಪಡೆಯುವಂತೆ ತಿಳಿಸಿದರು. ಇದನ್ನು ಪ್ರತಿಭಟನಾಕಾರರು ನಿರಾಕರಿಸಿದರು. ಇದಾದ ನಂತರ, ತಹಸೀಲ್ದಾರ್ ಕೊಠಡಿಗೆ ತೆರಳಿದ ಅವರು, ಕಂದಾಯ ಹಾಗೂ ಇನ್ನಿತರ ಅಧಿಕಾರಿಗಳೊಡನೆ ಚರ್ಚೆ ನಡೆಸಿದರು. ಹಾಗೂ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು. ನಂತರ ಕ್ರಾಫ್ಟ್ ಪಾರ್ಕ್, ಗೊಂಬೆ ತಯಾರಿಕಾ ಘಟಕಗಳನ್ನು ವೀಕ್ಷಿಸಿದರು. ದೊಡ್ಡಮಳೂರು ಶ್ರೀ ಅಪ್ರಮೇಯ ದೇವಸ್ಥಾನಕ್ಕೂ ಭೇಟಿ ನೀಡಿದರು.