

ನಗರದ ದಿವಾನ್ಸ್ ರಸ್ತೆಯಲ್ಲಿರುವ ಅಂಬೇಡ್ಕರ್ ಭವನದ ಕಾಮಗಾರಿ ವಿಳಂಬ ಖಂಡಿಸಿ ಪ್ರಬುದ್ಧ ಭಾರತ ಭೀಮ್ ಸೇನೆ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಅಪೂರ್ಣಗೊಂಡಿರುವ ಭವನದ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು, ಘೋಷಣೆ ಕೂಗಿ ಆಕ್ರೋಶವ್ಯಕ್ತ ಪಡಿಸಿದರು.
ಕಾಮಗಾರಿಯನ್ನು 2011-12ರಲ್ಲಿ ಪ್ರಾರಂಭವಾಗಿತ್ತು. 13 ವರ್ಷವಾದರೂ ಪೂರ್ಣಗೊಂಡಿಲ್ಲ. ಇದು ವಿಪರ್ಯಾಸ. ಈ ಅವಧಿಯಲ್ಲಿ ಕಾಂಗ್ರೆಸ್, ಬಿಜೆಪಿ, ಸಮ್ಮಿಶ್ರ ಸರ್ಕಾರಗಳು ಆಡಳಿತ ನಡೆಸಿವೆ. ಯಾವೊಂದು ಸರ್ಕಾರವೂ ಭವನ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕ ಉಪಯೋಗಕ್ಕೆ ಒದಗಿಸಿಕೊಡುವಲ್ಲಿ ವಿಫಲವಾಗಿವೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಈ ಬಾರಿ ಬಜೆಟ್‌ನಲ್ಲಿ ಭವನ ಪೂರ್ಣಗೊಳಿಸಲು ಅಗತ್ಯ ಅನುದಾನ ಮೀಸಲಿರಿಸಬೇಕು. ಮುಂಬರುವ ಅಂಬೇಡ್ಕರ್ ಜಯಂತಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲು ಸರ್ಕಾರ ಕ್ರಮವಹಿಸಬೇಕೆಂದು ಒತ್ತಾಯಿಸಿದರು.
ಸೇನೆ ಅಧ್ಯಕ್ಷ ಸಿದ್ದರಾಜು, ಪ್ರಮುಖರಾದ ಬಿ.ಸುರೇಶ್, ಪ್ರಭಾಕರ್, ಆರ್.ಸಿದ್ದಪ್ಪ, ರಾಮು, ಮಂಜುನಾಥ್, ಸುರೇಶ್, ರಂಗಸ್ವಾಮಿ, ಜವರಪ್ಪ, ನಿಂಗರಾಜು, ಚಲುವರಾಜು, ಶೇಖರ್, ವೆಂಕಟೇಶ್, ಪ್ರಕಾಶ್, ಸಣ್ಣಯ್ಯ, ನಾಗೇಶ್, ರಾಮಸಿಂಗಣ್ಣ, ವನಜಾಕ್ಷಿ ಇತರರು ಇದ್ದರು.