ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ

17
Published on

ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅಶೋಕಪುರಂನ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ನಂತರ ವಿವಿಧ ಸಂಘಟನೆಗಳು ಆಯೋಜಿಸಿದ್ದ ಮೆರವಣಿಗೆಗೆ ಚಾಲನೆ ನೀಡಿದರು. ಅಶೋಕಪುರಂ ಮುಖ್ಯ ರಸ್ತೆಯಲ್ಲಿ ಸಾಗಿದ ಮೆರವಣಿಗೆಯಲ್ಲಿ ಜನತೆಯ ಜತೆ ತಾವೂ ಸಾಗಿದರು.

ಬಲ್ಲಾಳ್ ವೃತ್ತದಲ್ಲಿ ಅಭಿಮಾನಿಗಳ ಒತ್ತಾಯದ ಮೇರೆಗೆ ಒಂದಷ್ಟು ಕಾಲ ನೃತ್ಯ ಮಾಡಿದರು. ನಂತರ ರಾಮಸ್ವಾಮಿ ವೃತ್ತದಲ್ಲಿ ಎಂ.ಕೆ.ಸೋಮಶೇಖರ್ ಅಭಿಮಾನಿಗಳ ಬಳಗದವರು ಏರ್ಪಡಿಸಿದ್ದ ಮಜ್ಜಿಗೆ, ಪಾನಕ, ಕೋಸಂಬರಿ ವಿತರಣೆಗೆ ತಾವೇ ಖುದ್ದು ನಿಂತು ಸಾವಿರಾರು ಜನರಿಗೆ ವಿತರಿಸಿದರು.

ನಂತರ ಚಾಮರಾಜ ಜೋಡಿರಸ್ತೆಯಲ್ಲಿ ಯುವಕರೊಟ್ಟಿಗೆ ಹೆಜ್ಜೆ ಹಾಕಲಾಯಿತು. ಮೆರವಣಿಗೆಯುದ್ದಕ್ಕೂ ಮಕ್ಕಳು, ಯುವಕರು, ಮಹಿಳೆಯರು, ಸಂಘ ಸಂಸ್ಥೆಗಳು ಎಂ.ಕೆ.ಸೋಮಶೇಖರ್ ಅವರು ಜತೆ ಭಾವಚಿತ್ರ ಕ್ಲಿಕ್ಕಿಸಿಕೊಂಡರು.

ಮಾಜಿ ಮೇಯರ್ ಪುರುಷೋತ್ತಮ್, ಮಾಜಿ ಉಪಮೇಯರ್ ಸಿದ್ದರಾಜು, ಆದಿ ಕರ್ನಾಟಕ ಮಹಾಸಭಾದ ಅಧ್ಯಕ್ಷ ಸಿದ್ದರಾಜು, ದೊಡ್ಡ ಗರಡಿ ಅಧ್ಯಕ್ಷ ಜೋಗಿ ಮಹೇಶ್, ಚಿಕ್ಕಗರಡಿ ಅಧ್ಯಕ್ಷ ನಾಗರಾಜು(ಬಿಲ್ಲಯ್ಯ), ವಿ.ರಾಮಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net