ಅಂಬೇಡ್ಕರ್ ಉದ್ಯಾನವನದಲ್ಲಿ ಬೀಳುವ ಸ್ಥಿತಿಯಲ್ಲಿರುವು ಒಣಗಿದ ಮರಗಳು / ಮರಗಳನ್ನು ಕಟಾವು ಮಾಡಿ ಅನಾಹುತಗಳನ್ನು ತಪ್ಪಿಸಲು ಸಾರ್ವಜನಿಕರು ಒತ್ತಾಯ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಲಾರ ನಗರದ ಜಯನಗರದ ಅಂಬೇಡ್ಕರ್ ಉದ್ಯಾನವನದಲ್ಲಿ ಒಂದು ದೊಡ್ಡ ಮರ ಸೇರಿದಂತೆ ೩ ಮರಗಳು ಒಣಗಿದ್ದು, ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದ ಯಾವ ಸಂದರ್ಭದಲ್ಲಿ ಮರಗಳು ಉರುಳಿ ಬೀಳುತ್ತಿವೆಯೋ ಗೊತ್ತಿಲ್ಲ. ಮರಗಳನ್ನು ತೆರವುಗೊಳಿಸುವಂತೆ ನಗರಸಭೆಗೆ ಸದಸ್ಯರು ಹಾಗೂ ಸಾರ್ವಜನಿಕರು ದೂರು ನೀಡಿದ್ದರೂ ಅವುಗಳನ್ನು ಇದುವರೆವಿಗೂ ತೆರವುಗೊಳಿಸಲು ಸಾಧ್ಯವಾಗಿಲ್ಲ. ಇದರಿಂದ ಅನಾಹುತಗಳು ಆಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕೋಲಾರ ನಗರದಲ್ಲಿರುವ ಉದ್ಯಾನವನಗಳಿಗೆ ಕಾಯಕಲ್ಪ ಕಲ್ಪಿಸಲು ಜಿಲ್ಲಾಧಿಕಾರಿ ಮುಂದಾಗಿದ್ದು, ಸ್ವಚ್ಛತಾ ಅಭಿಯಾನದ ಜೊತೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ವಿಶೇಷ ಕಾಳಹಿ ವಹಿಸಿದ್ದಾರೆ. ಆದರೆ ಅಂಬೇಡ್ಕರ್ ಉದ್ಯಾನವನದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದ್ದರೆ ರಸ್ತೆ ಸೇರಿದಂತೆ ಸ್ವಚ್ಛತಾ ಅಭಿಯಾನ ಕೈಗೊಂಡಿಲ್ಲ.

ದಸರಾ ರಜೆ ನೀಡಿರುವುದರಿಂದ ಬೆಳ್ಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಹಿರಿಯರ ಜೊತೆಗೆ ಮಕ್ಕಳು ಉದ್ಯಾನವನದಲ್ಲಿ ಆಟವಾಡಲು ಹೆಚ್ಚಾಗಿ ಆಗಮಿಸುತ್ತಿದ್ದಾರೆ. ಅಂಬೇಡ್ಕರ್ ಉದ್ಯಾನವನದಲ್ಲಿ ಮಕ್ಕಳು ಆಟವಾಡಲು ಅಳವಡಿಸಿರುವ ಆಟೋಪಕರಣಗಳ ಮೇಲ್ಭಾಗದಲ್ಲಿ ಒಣಗಿದ ಮರ ಇದ್ದು, ಈ ಮರ ಮಕ್ಕಳ ಮೇಲೆ ಅಥವಾ ವಿಶ್ರಾಂತಿಗಾಗಿ ಕುಳಿತುಕೊಳ್ಳಲು ಹಿರಿಯರ ಮೇಲೆ ಬೀಳುವ ಪರಿಸ್ಥಿತಿ ಇದೆ.

ಇದೇ ಉದ್ಯಾನವನದಲ್ಲಿ ಸುಮಾರು ೪ ಮರಗಳು ಒಣಗಿದ್ದು, ಮರಗಳನ್ನು ತೆರವುಗೊಳಿಸಲು ನಗರಸಭೆ ಸದಸ್ಯ ಮುರಳೀಗೌಡ ನಗರಸಭೆಗೆ ದೂರು ನೀಡಿದ್ದಾರೆ. ನಗರಸಭೆ ಅಧಿಕಾರಿಗಳು ಅರಣ್ಯ ಇಲಾಖೆಗೆ ದೂರು ನೀಡಿ ಮರಗಳನ್ನು ತೆರವುಗೊಳಿಸಲು ಸೂಚಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಇದುವರೆವಿಗೂ ಮರಗಳನ್ನು ತೆರವುಗೊಳಿಸಿಲ್ಲ. ಬೆಳ್ಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ವಯೋವೃದ್ದರು ಪಾರ್ಕಿನಲ್ಲಿ ವಾಕಿಂಗ್ ಮಾಡುತ್ತಾರೆ. ಕುಳಿತುಕೊಳ್ಳಲು ವಿಶ್ರಾಮಧಾಮಗಳನ್ನು ಹಾಗೂ ಕಲ್ಲು ಬೆಂಚುಗಳನ್ನು ನಿರ್ಮಿಸಿದ್ದಾರೆ. ಅದರ ಪಕ್ಕದಲ್ಲಿಯೇ ಒಣಗಿದ ಮರಗಳು ಇರುವುದರಿಂದ ಯಾವ ಸಂದರ್ಭದಲ್ಲಿಯಾದರೂ ಮರಗಳು ಬೀಳಬಹುದು ಎಂಬುದು ವಾಕಿಂಗ್ ಮಾಡಲು ಹಿರಿಯರ ಆರೋಪವಾಗಿದೆ.

ಅಂಬೇಡ್ಕರ್ ಉದ್ಯಾನವನ ನೋಡಲು ಸುಂದರವಾಗಿದ್ದರೂ ರಸ್ತೆಗಳ ಅಭಿವೃದ್ಧಿ ಇಲ್ಲ. ಮಳೆ ಬಂದರೆ ನೀರು ನಿಲ್ಲುತ್ತವೆ. ಜಿಲ್ಲಾಧಿಕಾರಿಗಳು ಅಭಿವೃದ್ದಿಪಡಿಸಲು ಮುಂದಾಗಿದ್ದಾರೆ. ಆದರೆ ಸಂಬAಧಪಟ್ಟ ಅಧಿಕಾರಿಗಳು ಇದುವರೆವಿಗೂ ಅಂಬೇಡ್ಕರ್ ಉದ್ಯಾನವನಕ್ಕೆ ಭೇಟಿ ನೀಡಿಲ್ಲ. ನೆಲ ಹಾಸಿಗೆಯ ಮೇಲೆ ಹುಲ್ಲು ಹೆಚ್ಚಾಗಿ ಬೆಳೆದಿದೆ. ಅದನ್ನು ಕಟಾವು ಮಾಡಿಲ್ಲ. ಮಕ್ಕಳು ರಜೆ ಇರುವ ಕಾರಣ ಆಟವಾಡಲು ಹೆಚ್ಚಾಗಿ ಬರುತ್ತಿದ್ದಾರೆ. ಹುಲ್ಲಿನ ಮೇಲೆಯೇ ಆಟವಾಡಲು ತೆರಳುತ್ತಾರೆ. ಮಳೆಯ ತೇವಾಂಶದಿAದ ಬಿಸಿಲಿಗೆ ಹಾವುಗಳು ಹೆಚ್ಚಾಗುತ್ತಿವೆ. ಹುಲ್ಲನ್ನು ಕಟಾವು ಮಾಡಬೇಕು. ಮತ್ತು ನೀರು ನಿಲ್ಲದಂತೆ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಆರೋಪಿಸಿದ್ದಾರೆ.

ಕೋಟ್

ಮರಗಳನ್ನು ಕಟಾವು ಮಾಡಲು ನಗರಸಭೆ ಮೂಲಕ ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ. ಆದರೆ ಇದುವರೆವಿಗೂ ಅರಣ್ಯ ಇಲಾಖೆಯವರು ಮರಗಳನ್ನು ತೆರವು ಮಾಡಲು ಮುಂದಾಗುತ್ತಿಲ್ಲ. ಇತ್ತೀಚೆಗೆ ರಜೆ ಇರುವ ಕಾರಣ ಆಟವಾಡುವ ಮಕ್ಕಳ ಸಂಖ್ಯೆಯು ಹೆಚ್ಚಾಗಿ ಉದ್ಯಾನವನಕ್ಕೆ ಬರುತ್ತಿದ್ದಾರೆ. ಮತ್ತೊಂದು ಬಾರಿ ಅರಣ್ಯ ಇಲಾಖೆಗೆ ಹೆಚ್ಚರಿಕೆ ನೀಡಲಾಗುವುದು. ಉದ್ಯಾನವನದಲ್ಲಿರುವ ವಾಕಿಂಗ್ ಪಾರ್ಕ್ಗಳ ದುರಸ್ಥಿ ಮತ್ತು ಹೆಚ್ಚಾಗಿ ಬೆಳೆದಿರುವ ಹುಲ್ಲನ್ನು ಕಟಾವು ಮಾಡಿಸಲು ನಗರಸಭೆ ಅಧಿಕಾರಿಗಳ ಮೇಲೆ ಒತ್ತಡ ತರಲಾಗುವುದು.

-ಮುರಳಿಗೌಡ, ನಗರಸಭಾ ಸದಸ್ಯರು, ಕೋಲಾರ

ಚಿತ್ರ ೨೨ ಕೆ.ಎಲ್.ಆರ್. ೦೨ : ಅಂಬೇಡ್ಕರ್ ಉದ್ಯಾನವನದಲ್ಲಿ ಒಣಗಿರುವ ಮರ.

ಚಿತ್ರ ೨೨ ಕೆ.ಎಲ್.ಆರ್. ೦೨ಎ : ಒಣಗಿರುವ ಮರದ ಕೆಳಗೆ ಮತ್ತು ಪಕ್ಕದಲ್ಲಿ ಮಕ್ಕಳು ಆಟವಾಡುತ್ತಿರುವುದು.

ಚಿತ್ರ ೨೨ ಕೆ.ಎಲ್.ಆರ್. ೦೨ಬಿ : ಮುರಳೀಗೌಡ, ನಗರಸಭಾ ಸದಸ್ಯರು, ಕೋಲಾರ ರವರ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net