ಅಂಬೇಡ್ಕರ್ ಆಶಯವೇ ಇಂದಿನ ಪಂಚ ಗ್ಯಾರಂಟಿ

Oplus_16908288
ವಿರಾಜಪೇಟೆ ಪಟ್ಟಣದ ಅಂಬೇಡ್ಕರ್ ಭವನದ ಎದುರು ಸ್ಥಾಪಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನು ಎ.ಎಸ್.ಪೊನ್ನಣ್ಣ ಅನಾವರಣಗೊಳಿಸಿದರು. ದೇಚಮ್ಮ, ಫಸಿಹಾ ತಬುಸಂ, ಜೂನ, ಅಲೀರ ರಶೀದ್, ಅನಂತ ಶಂಕರ , ಮೋಹನ್ ಕುಮಾರ್, ರಾಮಚಂದ್ರ, ಕೆ.ಸಿ. ಅಪ್ಪಣ್ಣ ಇದ್ದರು.
Published on

ವಿರಾಜಪೇಟೆ : ಬ್ರಿಟಿಷರ ಕಾಲದ ಕಾನೂನಿನಲ್ಲಿ ಮೂಲಭೂತ ಹಕ್ಕುಗಳೇ ಇರಲಿಲ್ಲ. ಅದನ್ನು ಸಂವಿಧಾನದ ಮೂಲಕ ಎಲ್ಲ ವರ್ಗದ ಜನರಿಗೆ ನೀಡಿದ ಹೆಗ್ಗಳಿಕೆ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೇಳಿದರು.

ವಿರಾಜಪೇಟೆ, ಪೊನ್ನಂಪೇಟೆ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಪಟ್ಟಣದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 134 ನೇ ಜನ್ಮ ದಿನಾಚರಣೆ ಹಾಗೂ ಪಟ್ಟಣದ ಅಂಬೇಡ್ಕರ್ ಭವನದ ಎದುರು ಸ್ಥಾಪಿಸಲಾಗಿರುವ ಡಾ.ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡಿದರು.

ಅಂಬೇಡ್ಕರ್ ಸಂವಿಧಾನದ ಮೂಲಕ ಎಲ್ಲರಿಗೂ ಸಮಾನತೆ ನೀಡಿ ಶೋಷಿತ ಸಮಾಜ, ಹಿಂದುಳಿದವರಿಗೆ ಅನೂಕೂಲ ಕಲ್ಪಿಸಿದರು. ನಾನು ಅನೇಕ ಹಾಡಿಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿ ಸಮಾನತೆ ಇದೆ. ಸಂವಿಧಾನದಲ್ಲಿ ಅಭಿವೃದ್ಧಿ, ಕಾನೂನುಗಳ ಬಗ್ಗೆ ತಿಳಿಸಿದೆ. ಇಲ್ಲಿ ದೇಶದ ಸಂಪತ್ತು ಎಲ್ಲ್ಲರಿಗೂ ಸೇರಬೇಕು. ಹಣದ ಕ್ರೋಡೀಕರಣಕ್ಕೆ ಸರ್ಕಾರ ಅವಕಾಶ ನೀಡಬಾರದು ಎನ್ನುವ ಆಶೋತ್ತರ ಇದೆ. ಇದನ್ನೇ ನಮ್ಮ ಸರ್ಕಾರ ಪಂಚ ಗ್ಯಾರಂಟಿ ಮೂಲಕ ಬಡವರಿಗೆ ವಿವಿಧ ವರ್ಗದವರಿಗೆ ಹಂಚುತ್ತಿದೆ ಎಂದು ಪೊನ್ನಣ್ಣ ಹೇಳಿದರು.

ಪುರಸಭೆಯ ಅಧ್ಯಕ್ಷೆ ಮನೆಯಪಂಡ ದೇಚಮ್ಮ, ಉಪಾಧ್ಯಕ್ಷೆ ಫಸಿಹಾ ತಬುಸಂ, ಸದಸ್ಯ ಜೂನ, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಅಲೀರ ರಶೀದ್, ತಹಸೀಲ್ದಾರ್‌ಗಳಾದ ಅನಂತ ಶಂಕರ, ಮೋಹನ್ ಕುಮಾರ್, ತಾಪಂ ಇಒ ಕೆ.ಸಿ.ಅಪ್ಪಣ್ಣ, ಪೊನ್ನಂಪೇಟೆ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಲಾಲ ಅಪಣ್ಣ, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರೀತಿ ಚಿಕ್ಕಮಾದಯ್ಯ, ಪುರಸಭೆ ಮುಖ್ಯಾಧಿಕಾರಿ ಪಿ.ಕೆ.ನಾಚಪ್ಪ, ಜಾನಪದ ಸಾಹಿತ್ಯ ಪರಿಷತ್ ಸದಸ್ಯ ಮುನ್ನೀರ್ ಅಹ್ಮದ್, ಶಾಸಕರ ಅಪ್ತ ಕಾರ್ಯದರ್ಶಿ ರಾಮಚಂದ್ರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net