ಅಂಧತ್ವ ನಿವಾರಣೆಗೆ ಕ್ರಮ / ಹಸಿರು ಪಟಾಕಿ ಬಳಸಲು ಜಿಲ್ಲಾಧಿಕಾರಿ ಕರೆ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಸೃಷ್ಠಿಯ ಸೋಬಗನ್ನರಿಯಲು ದೃಷ್ಠಿ ಬಹುಮುಖ್ಯ, ಪಂಚೇAದ್ರಿಯಗಳಲ್ಲಿ ಕಣ್ಣು ಅತ್ಯಂತ ಮುಖ್ಯವಾದ ಅಂಗವಾಗಿದ್ದು, ಕಣ್ಣಿನ ಆರೋಗ್ಯಕ್ಕಾಗಿ ಉತ್ತಮ ಆಹಾರ, ಹವ್ಯಾಸ ಹಾಗೂ ಕಣ್ಣಿನ ವ್ಯಾಯಾಮ ಮಾಡಬೇಕೆಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಆಯೋಜಿಸಿದ್ದ, ೨೪ನೇ ವಿಶ್ವ ದೃಷ್ಠಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಹಿಂದೆ ವಯೋಸಹಜವಾಗಿ ಕಣ್ಣಿನ ದೃಷ್ಠಿದೋಷ ಬರುತ್ತಿದ್ದು, ಆದರೆ ಇತ್ತೀಚಿನ ದಿನಗಳಲ್ಲಿ ಅತಿಯಾದ ಮೊಬೈಲ್ ಬಳಕೆ ಹಾಗೂ ಟಿ.ವಿ. ವಿಕ್ಷಣೆಯಿಂದ ಚಿಕ್ಕ ವಯಸ್ಸಿನ ಮಕ್ಕಳಿಗೂ ದೃಷ್ಠಿದೋಷ ಹೆಚ್ಚಾಗಿ ಕಂಡುಬರುತ್ತಿದೆ. ಪೋಷಕರು ಮಕ್ಕಳ ಆಟ ಊಟಗಳ ವಿಷಯದಲ್ಲೂ ಮೊಬೈಲ್ ಬಳಕೆಗೆ ಪ್ರೋತ್ಸಾಹ ನೀಡುತ್ತಿದ್ದು, ಇದು ಕಳವಳಕಾರಿ ವಿಷಯವಾಗಿದೆ. ಗರ್ಭಿಣಿಯಿದ್ದಾಗಿನಿಂದಲೇ ಕಣ್ಣಿನ ಅರೈಕೆ ಬಗ್ಗೆ ಮುಂಜಾಗ್ರತೆ ವಹಿಸಬೇಕೆಂದರು.

ಪಟಾಕಿ ಬಳಕೆ ನಿಷೇಧ

ದೀಪಾವಳಿ ಹಬ್ಬದಲ್ಲಿ ಪಟಾಕಿ ದಾಸ್ತಾನು ಹಾಗೂ ಬಳಕೆ ಹೆಚ್ಚಾಗಿರುತ್ತದೆ. ಪ್ರಸ್ತುತ ಪಟಾಕಿ ದಾಸ್ತಾನು ಬಗ್ಗೆ ಎಚ್ಚರ ವಹಿಸಿದ್ದು, ಈ ಬಾರಿ "ಹಸಿರು ಪಟಾಕಿ"ಯನ್ನು ಬಳಸಲು ಸೂಚಿಸಲಾಗಿದೆ. ಪಟಾಕಿ ಬಳಸುವ ಕುರಿತು ಅಧಿಕಾರಿಗಳು ಕೊಟ್ಟಿರುವ ಗುರಿಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಬೇಕೆಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಸಿಬ್ಬಂದಿಗೆ ಕಣ್ಣಿನ ತಪಾಸಣೆ ಕೈಗೊಳ್ಳಲಾಯಿತು. ಮತ್ತು ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.

ಜಿಲ್ಲಾ ಶಸ್ತçಚಿಕಿತ್ಸಕರಾದ ಎಸ್.ಎನ್. ವಿಜಯ್‌ಕುಮಾರ್, ಡಿ.ಎಚ್.ಒ ಡಾ.ಜಗದೀಶ್, ಡಾ. ನಾರಾಯಣಸ್ವಾಮಿ, ಡಾ. ಶ್ರೀಧರ್, ಪ್ರೇಮ ಹಾಗೂ ತರಬೇತಿ ಕೇಂದ್ರದ ಪ್ರಾಥಮಿಕ ಆರೋಗ್ಯಾಧಿಕಾರಿಗಳು ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.

ಚಿತ್ರ ೧೨ ಕೆ.ಎಲ್.ಆರ್. ೦೪ : ವಿಶ್ವ ದೃಷ್ಟಿ ದಿನಾಚರಣೆಯನ್ನು ಗಿಡಕ್ಕೆ ನೀರುಣಿಸುವ ಮೂಲಕ ಜಿಲ್ಲಾಧಿಕಾರಿ ಅಕ್ರಂ ಪಾಷ ಚಾಲನೆ ನೀಡಿದರು. ಜಿಲ್ಲಾ ಶಸ್ತç ಚಿಕಿತ್ಸಕ ವಿಜಯಕುಮಾರ್, ಡಿ.ಹೆಚ್.ಓ. ಡಾ.ಜಗದೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net