

ಮಂಡ್ಯ: ನಾನು ಜೆಡಿಎಸ್ ಬಿಡುವ ಮುನ್ನ ನನ್ನ ಜತೆ ಬನ್ನಿ. ನೀವು ಮಂತ್ರಿಯಾಗುತ್ತೀರಾ ಎಂದು ಕರೆದಿದ್ದೆ. ಆದರೆ ರವೀಂದ್ರ ಶ್ರೀಕಂಠಯ್ಯ ಬರಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.
ಶ್ರೀರಂಗಪಟ್ಟಣ ದಸರಾ ಅಂಗವಾಗಿ ಶುಕ್ರವಾರ ಪಟ್ಟಣದ ಬತೇರಿಯಲ್ಲಿ ಆಯೋಜಿಸಿದ್ದ ರಸಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರವೀಂದ್ರ ಶ್ರೀಕಂಠಯ್ಯ ನನ್ನ ಆತ್ಮೀಯರು. ಕಾರಣಾಂತರದಿಂದ ನಾನು ಜೆಡಿಎಸ್‌ನಿಂದ ಬೇರೆ ಹೋಗಬೇಕಾಯಿತು. ಈ ವೇಳೆ ರವೀಂದ್ರ ಅವರೊಂದಿಗೆ ಮಾತನಾಡಿದ್ದೆ. ನೀವು ಬನ್ನಿ ಅಣ್ಣ, ಮಂತ್ರಿಯಾಗುತ್ತೀರಾ ಎಂದಿದ್ದೆ. ಅಂದು ನನ್ನೊಂದಿಗೆ ಬಂದಿದ್ದರೆ ಮಂತ್ರಿಯಾಗಿರುತ್ತಿದ್ದರು ಎಂದರು.
ಈ ವೇಳೆ ಸ್ಥಳದಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಇದ್ದರು.