

ಎಚ್.ಡಿ.ಕೋಟೆ: ತಾಲೂಕಿನ ಅಂತರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ರೇಖಾ ಗುರುಸ್ವಾಮಿ, ಉಪಾಧ್ಯಕ್ಷೆಯಾಗಿ ರೂಪಾ ಸುಬ್ರಹ್ಮಣ್ಯ ಅವಿರೋಧವಾಗಿ ಆಯ್ಕೆಯಾದರು.
ಪಂಚಾಯಿತಿ ಆವರಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ರೇಖಾ, ರೂಪಾ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಮಂಜುನಾಥ್ ಅವಿರೋಧ ಆಯ್ಕೆ ಘೋಷಿಸಿದರು.
ಅಧ್ಯಕ್ಷೆ ರೇಖಾ ಗುರುಸ್ವಾಮಿ ಮಾತನಾಡಿದರು. ಮಾಜಿ ಅಧ್ಯಕ್ಷರಾದ ಸುಬ್ರಹ್ಮಣ್ಯ, ಕಲೀಂಪಾಷ, ರಾಜ್ಯ ಬೀಜ ನಿಗಮದ ಮಾಜಿ ಅಧ್ಯಕ್ಷ ಡಿ.ಸುಂದರದಾಸ್, ನವೀನ್‌ದಾಸ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಿದಾನಂದ, ಸದಸ್ಯರಾದ ಕವಿತಾ, ಪುಟ್ಟಮಲ್ಲಿ, ನಸ್ರಿನ್‌ತಾಜ್, ರತ್ನಮ್ಮ, ಎ.ಎಸ್.ಮಾರುತಿ, ಶಿವಲಿಂಗನಾಯಕ, ಪ್ರದೀಪ, ಮಹದೇವಮ್ಮ ಇದ್ದರು.