ಅಂಗವಿಕಲರನ್ನು ಮುಖ್ಯ ವಾಹಿನಿಗೆ ಕರೆತನ್ನಿ

09 NMG 01 (2)
ನಾಗಮಂಗಲದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಯೋಗೇಶ್, ಲಿಂಗಣ್ಣ ಎಸ್.ಜೇವರ್ಗಿ, ಗಿರೀಗೌಡ, ಚಂದ್ರಮೌಳಿ, ಮೇನಕಾದೇವಿ, ಅರುಣಬಾಯಿ ಇದ್ದರು.
Published on

ನಾಗಮಂಗಲ: ಅಂಗವಿಕಲರಿಗೆ ಅನುಕಂಪದ ಬದಲು ಸಮಾಜದಲ್ಲಿ ಅವಕಾಶ ನೀಡಬೇಕಿದ್ದು, ಅವರ ಸಾಮರ್ಥ್ಯದ ಬಗ್ಗೆ ಕೀಳರಿಮೆ ಬೇಡ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಯೋಗೇಶ್ ಹೇಳಿದರು.

ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಶುಕ್ರವಾರ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಾರೊಬ್ಬರನ್ನೂ ಧರ್ಮ, ಜಾತಿ, ಪ್ರಾದೇಶಿಕತೆಯಿಂದ ಅಳೆಯಬಾರದು. ಅಂಗವಿಕಲರಿಗೆ ಅವಕಾಶ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಕರೆತರಬೇಕಿದೆ. ಜತೆಗೆ ಸೂಕ್ತ ಅವಕಾಶ ನೀಡಿದರೆ ಎಲ್ಲರಂತೆ ಅವರೂ ಸಾಧನೆ ಮಾಡಲಿದ್ದಾರೆ ಎಂದರು.

ಗ್ರಾಮೀಣ ಅಂಗವಿಕಲರ ಮರು ವಸತಿ ಕಾರ್ಯಕರ್ತ ಲಿಂಗಣ್ಣ ಎಸ್.ಜೇವರ್ಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾಧೀಶ ಗಿರೀಗೌಡ, ತಾಲೂಕು ಪಂಚಾಯಿತಿ ಇಒ ಚಂದ್ರಮೌಳಿ, ತಾ.ಪಂ. ನರೇಗಾ ಸಹಾಯಕ ನಿರ್ದೇಶಕಿ ಮೇನಕಾದೇವಿ, ವಕೀಲರ ಸಂಘದ ಅಧ್ಯಕ್ಷ ಟಿ.ಕೆ.ರಾಮೇಗೌಡ, ಉಪಾಧ್ಯಕ್ಷ ಪುರುಷೋತ್ತಮ, ಸಹಾಯಕ ಸರ್ಕಾರಿ ಅಭಿಯೋಜಕಿ ಅರುಣಬಾಯಿ, ವಕೀಲ ಕೆ.ಬಿ.ಶುಭಮೂರ್ತಿ, ರಮೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net