ಅಂಗವಿಕಲರ ಅಭಿವೃದ್ಧಿಗೆ ಒತ್ತು

2kdr3 handicap
ಕಡೂರು ತಾಪಂ ಕಚೇರಿ ಆವರಣದಲ್ಲಿ ಅಂಗವಿಕಲ ಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಣೆ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ಆಸಂಧಿ ಕಲ್ಲೇಶ್, ಸಿ.ಆರ್.ಪ್ರವೀಣ್, ವೀರಭದ್ರಯ್ಯ, ಶಾನವಾಜ್ ಮತ್ತಿತರರಿದ್ದರು.
Published on

ಕಡೂರು: ಅಂಗವಿಕಲರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲು ರಾಜ್ಯ ಸರ್ಕಾರ ಒತ್ತು ನೀಡುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಪಟ್ಟಣದ ತಾಪಂ ಕಚೇರಿ ಆವರಣದಲ್ಲಿ ಸೋಮವಾರ ಅಂಗವಿಕಲ ಲಾನುಭವಿಗಳಿಗೆ ತ್ರಿಚಕ್ರ ವಾಹನಗಳು ಮತ್ತು ಸಾಧನ ಸಲಕರಣೆಗಳನ್ನು ವಿತರಿಸಿ ಮಾತನಾಡಿದ ಅವರು, ಅಂಗವಿಕಲರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ವಿವಿಧ ಸೌಲಭ್ಯಗಳ ಅಡಿಯಲ್ಲಿ ಸಲಕರಣೆ ನೀಡುವ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ. ಇದರಿಂದ ಅವರ ಮನೋಸ್ಥೈರ್ಯ ಹೆಚ್ಚುತ್ತದೆ. ಅಂಗವಿಕಲರ ಪುನರ್ವಸತಿ ಕೇಂದ್ರ ಕಚೇರಿಯಡಿ ಮಂಜೂರಾಗಿರುವ ಮೂರು ತ್ರಿಚಕ್ರ ವಾಹನಗಳು, ಒಂದು ಬ್ಯಾಟರಿ ಚಾಲಿತ ವೀಲ್‌ಚೇರ್, ಲ್ಯಾಪ್‌ಟ್ಯಾಪ್ ಸೇರಿದಂತೆ ವಿವಿಧ ಸಾಧನ ಸಲಕರಣೆಗಳನ್ನು ವಿತರಿಸಲಾಗಿದೆ ಎಂದರು.

ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಆಸಂಧಿ ಕಲ್ಲೇಶ್, ತಾಪಂ ಇಒ ಸಿ.ಆರ್.ಪ್ರವೀಣ್, ಜಿಲ್ಲಾ ಅಂಗವಿಕಲರ ಪ್ರಭಾರ ಅಧಿಕಾರಿ ವೀರಭದ್ರಯ್ಯ, ಶಾನವಾಜ್, ತಾಪಂ ಮಾಜಿ ಅಧ್ಯಕ್ಷ ದಾಸಯ್ಯನಗುತ್ತಿ ಚಂದ್ರಪ್ಪ, ಸಾಣೇಹಳ್ಳಿ ಆರಾಧ್ಯ, ಅಣ್ಣೀಗೆರೆ ತಮ್ಮಯ್ಯ, ರಾಜೇಶ್, ಕಿರಣ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net