ಅ.24 ಮತ್ತು 25ರಂದು ಆನ್‌ಲೈನ್ ಸೇವೆ ಅಲಭ್ಯ

Online Order
Published on

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ದ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣದ ಹಿನ್ನೆಲೆಯಲ್ಲಿ ಅ.24 ಮತ್ತು 25ರಂದು ಆನ್‌ಲೈನ್ ಸೇವೆಗಳು ಲಭ್ಯವಿರುವುದಿಲ್ಲ ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.

ನಿಗದಿತ ದಿನಾಂಕಗಳಂದು ಸರ್ವರ್ ನಿರ್ವಹಣೆ ಇರುವುದರಿಂದ ಅ.24ರ ರಾತ್ರಿ 8 ಗಂಟೆಯಿಂದ ಅ.25ರ ಮಧ್ಯಾಹ್ನ 1 ಗಂಟೆಯವರೆಗೆ ಸೆಸ್ಕ್ ಆನ್‌ಲೈನ್ ಸೇವೆಗಳಾದ ವಿದ್ಯುತ್ ಬಿಲ್ ಪಾವತಿ, ಹೆಸರು ಬದಲಾವಣೆ, ಜಕಾತಿ ಬದಲಾವಣೆ ಹಾಗೂ ಹೊಸ ಸಂಪರ್ಕ ಸೇರಿದಂತೆ ಇತರ ಆನ್‌ಲೈನ್ ಆಧಾರಿತ ಸೇವೆಗಳು ಲಭ್ಯವಿರುವುದಿಲ್ಲ.

ಪ್ರಮುಖವಾಗಿ ಸೆಸ್ಕ್ ವ್ಯಾಪ್ತಿಯ ಪ್ರದೇಶಗಳಾದ ಮೈಸೂರು, ನಂಜನಗೂಡು, ಹುಣಸೂರು, ಕೆ.ಆರ್. ನಗರ, ಮಂಡ್ಯ, ಮಳವಳ್ಳಿ, ಚಾಮರಾಜನಗರ, ಕೊಳ್ಳೇಗಾಲ, ಹಾಸನ, ಅರಸೀಕೆರೆ, ಚನ್ನರಾಯಪಟ್ಟಣ ಹಾಗೂ ಮಡಿಕೇರಿ ವ್ಯಾಪ್ತಿಯ ಗ್ರಾಹಕರಿಗೆ ಆನ್‌ಲೈನ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ ಗ್ರಾಹಕರು ಸಹಕರಿಸುವಂತೆ ಸೆಸ್ಕ್ ಪ್ರಕಟಣೆಯಲ್ಲಿ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net