Zubeen Garg | ಅವನಿಲ್ಲದೆ ಏನಿಲ್ಲ... ಸಿದ್ಧಾರ್ಥ ಶರ್ಮಾ ವಿರುದ್ಧದ ಎಫ್‌ಐಆರ್ ರದ್ದು ಪಡಿಸಿ ಎಂದ ಗಾಯಕ ಜುಬೀನ್​ ಪತ್ನಿ ಗರಿಮಾ..

Zubeen Garg
Published on

Zubeen Garg: ಈಶಾನ್ಯ ಭಾರತ ಉತ್ಸವದಲ್ಲಿ ಪ್ರದರ್ಶನ ನೀಡಲು ಸಿಂಗಾಪುರ್​​ಗೆ ತೆರಳಿದ್ದ ಜನಪ್ರಿಯ ಅಸ್ಸಾಮಿ ಗಾಯಕ ಜುಬೀನ್ ಗರ್ಗ್ ಸ್ಕೂಬಾ ಡೈವಿಂಗ್ ಅಪಘಾತದಲ್ಲಿ ಹಠಾತ್ ಸಾವನ್ನಪ್ಪಿದ್ದು, ಸಂಗೀತ ಲೋಕವನ್ನೇ ಆಘಾತಗೊಳಿಸಿತು. ಉತ್ಸವದ ಮುಖ್ಯ ಸಂಘಟಕ ಶ್ಯಾಮ್ ಕನು ಮಹಾಂತ ಮತ್ತು ಗರ್ಗ್‌ನ ವ್ಯವಸ್ಥಾಪಕ ಸಿದ್ಧಾರ್ಥ ಶರ್ಮಾ ವಿರುದ್ಧ ಎಫ್‌ಐಆರ್‌ಗಳು ದಾಖಲಾಗಿದ್ದವು.

ಈ ವಿಷಯವಾಗಿ ಭಾವನಾತ್ಮಕ ವೀಡಿಯೊವೊಂದರಲ್ಲಿ ಜುಬೀನ್ ಪತ್ನಿ ಗರಿಮಾ ಗರ್ಗ್, ಸಿದ್ಧಾರ್ಥ್ ವಿರುದ್ಧದ ಎಫ್‌ಐಆರ್‌ಗಳನ್ನು ಹಿಂಪಡೆಯಬೇಕು ಮತ್ತು ಪತಿಯ ಅಂತ್ಯಕ್ರಿಯೆ ಶಾಂತಿಯುತವಾಗಿ ನಡೆಯಲು ಅವಕಾಶ ನೀಡಬೇಕು ಮನವಿ ಮಾಡಿಕೊಂಡಿದ್ದಾರೆ.

ಜುಬೀನ್ ಗರ್ಗ್ ಅವರ ಶಾಂತಿಯುತ ವಿದಾಯಕ್ಕೆ ಗರಿಮಾ ಗರ್ಗ್ ಮನವಿ

ಜುಬೀನ್ ಅವರ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಗರಿಮಾ, ಅದರಲ್ಲಿ ಕಣ್ಣೀರು ಸುರಿಸುತ್ತಾ, ಕೈ ಮುಗಿದು ಶಾಂತಿವಾಗಿರುವಂತೆ ಮನವಿ ಮಾಡಿದ್ದು, ಜುಬೀನ್​​ ಬದುಕಿದ್ದಾಗ ಅವರ ಅಭಿಮಾನಿಗಳು ಯಾವ ರೀತಿ ಪ್ರೀತಿ ಮತ್ತು ಅಭಿಮಾನ ವ್ಯಕ್ತಪಡಿಸಿದ್ದರೋ, ಅದೇ ರೀತಿ ಅವರ ಅಂತಿಮ ವಿಧಿವಿಧಾನಗಳಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದರು. ಇದೇ ವೇಳೆ ಸಹಕಾರ ನೀಡುತ್ತಿರುವ ಪೊಲೀಸರು ಮತ್ತು ರಾಜ್ಯದ ಇತರ ಅಧಿಕಾರಿಗಳ ಬಗ್ಗೆ ಉಲ್ಲೇಖಿಸಿದರು.

ಸಿದ್ಧಾರ್ಥ್ ವಿರುದ್ಧದ ಎಫ್‌ಐಆರ್‌ಗಳ ಬಗ್ಗೆ ಮಾತನಾಡಿದ ನೀಡಿದ ಗರಿಮಾ, ಜುಬೀನ್‌ ಮ್ಯಾನೇಜರ್ ಆರಂಭದಿಂದಲೂ ತಮ್ಮ ಪತಿಗೆ ಸಹೋದರನಂತೆ ನೆರವಾಗಿದ್ದು, 2020 ರಲ್ಲಿ, ಜುಬೀನ್‌ ಅನಾರೋಗ್ಯಕ್ಕೆ ತುತ್ತಾದಾಗ, ನಾವು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈಗೆ ಕರೆದೊಯ್ಯಬೇಕಾಯಿತು, ಅದಷ್ಟೆ ಅಲ್ಲದೇ ಲಾಕ್‌ಡೌನ್ ಸಮಯದಲ್ಲಿ ಎಲ್ಲವೂ ಬಂದ್​ ಆಗಿದ್ದಾಗ, ಸಿದ್ಧಾರ್ಥ್ ನಮಗೆ ಆಹಾರ ಮತ್ತು ಇತರ ವಸ್ತುಗಳನ್ನು ಒದಗಿಸಿ ನೆರವಾಗಿದ್ದಾರೆ ಎಂದರು.

ಸಿದ್ಧಾರ್ಥ್ ಬಗ್ಗೆ ಇರುವ ಎಲ್ಲಾ ನಕಾರಾತ್ಮಕ ಭಾವನೆಗಳನ್ನು ಬದಿಗಿಡುವಂತೆ ಅಭಿಮಾನಿಗಳನ್ನು ಒತ್ತಾಯಿಸಿದ ಜುಬೀನ್​​ ಪತ್ನಿ, ಯಾರಾದರೂ ಅವರನ್ನು ಟೀಕಿಸಿದರೆ, ತಮ್ಮ ಪತಿ ಅವರ ಬೆಂಬಲಕ್ಕೆ ನಿಲ್ಲುತ್ತಿದ್ದರು, ಸಿದ್ಧಾರ್ಥ್​​​ರನ್ನು ಜುಬೀನ್ ಅಂತಿಮ ಯಾತ್ರೆಯ ಭಾಗವಾಗಲು ಅವಕಾಶ ನೀಡಬೇಕೆಂದು ಎಲ್ಲರನ್ನು ಕೇಳಿಕೊಳ್ಳುತ್ತೇನೆ, ನಾಳೆ ನನಗೆ ನನ್ನ ಸುತ್ತಲಿನ ಜನರು ಬೇಕು, ಮತ್ತು ಸಿದ್ಧಾರ್ಥ್ ಬೆಂಬಲ ಬೇಕು, ಅವರಿಲ್ಲದೆ ನಾನು ಎಲ್ಲವನ್ನೂ ನಿಭಾಯಿಸಲು ಸಾಧ್ಯವಿಲ್ಲ ಎಂದು ಗರಿಮಾ ಹೇಳಿದರು.

ಭಾನುವಾರ ಬೆಳಿಗ್ಗೆ ಜುಬೀನ್ ಪಾರ್ಥೀವ ಶರೀರವನ್ನು ದೆಹಲಿಯಿಂದ ಗುವಾಹಟಿಗೆ ತರಲಾಗಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net