VIDEO| ಈತನ ನಗುವಿಗೆ ಮಾರುಹೋದ ಸಂಸ್ಥೆ, ಆ ಪೋಟೋವನ್ನೇ ತನ್ನ ಖಾತೆಗೆ ಬಳಸಿದೆ; ಆ ನಗುವಿನ ಗುಟ್ಟೇನು...ಇಲ್ಲಿದೆ ನೋಡಿ!

ZOMATO
Published on

ನವದೆಹಲಿ: ಟಿಕ್‌ಟಾಕ್​ನ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ಸ್ವತಃ ಜೊಮ್ಯಾಟೊ ತನ್ನ ಖಾತೆಗೆ ಈ ಬೈಕ್​ ರೈಡರ್​ನ ಫೋಟೋ ಬಳಸಿದೆ!

ಜೊಮ್ಯಾಟೊ ಹ್ಯಾಪಿ ರೈಡರ್ ಒಬ್ಬರ ಪುಟ್ಟ ಸಂದರ್ಶನದ ವಿಡಿಯೋ ವೈರಲ್​ ಆಗಿದೆ. ಸಂದರ್ಶನದಲ್ಲಿ ಹ್ಯಾಪಿ ರೈಡರ್​ನ ನಗುವಿಗೆ ಮಾರುಹೋಗಿದ್ದು ಹಲವು ರೀತಿಯಲ್ಲಿ ಕಮೆಂಟ್​ ಮಾಡಿದ್ದಾರೆ.

ಆ ಸಂದರ್ಶನದಲ್ಲಿ ಜೊಮ್ಯಾಟೊ ಫುಡ್​​ ಡೆಲಿವರಿ ಬಗ್ಗೆ ಹ್ಯಾಪಿ ರೈಡರ್ ಮಾತನಾಡಿದ್ದು ಸಂಬಳ ಸಮಯಕ್ಕೆ ಸರಿಯಾಗಿ ದೊರೆಯುತ್ತಿದೆ, ಜತೆಗೆ ಭತ್ಯೆಯು ಸರಿಯಾಗಿ ಸಿಗುತ್ತದೆ ಎಂದು ಹರ್ಷ ವ್ಯಕ್ತಪಡಿಸಿದ್ದಾನೆ.

ದಿನಕ್ಕೆ 350 ರೂಪಾಯಿ ದುಡಿಯುತ್ತೇನೆ. ಸಂತಸವಾಗಿದ್ದೇನೆ ಎಂದು ಮುಗುಳು ನಗುತ್ತ ಹೇಳುತ್ತಾನೆ. ಅದಕ್ಕೆ ಸಂದರ್ಶನ ಮಾಡುವವ ನಗು ತುಂಬ ಚನ್ನಾಗಿದೆ, ಸಂಬಳ ಸರಿಯಾಗಿ ಸಿಗುತ್ತಾ? ಎಂಬ ಪ್ರಶ್ನೆಗೆ ನುಗುತ್ತಲೇ ಹೌದು ಎಂದು ಉತ್ತರಿಸಿದ್ದಾನೆ.

ಈ ನಗುವಿಗೆ ನೆಟ್ಟಿಗರು ಮಾರು ಹೋಗಿದ್ದಾರೆ. ವಿವಿಧ ಬಗೆಯಲ್ಲಿ ಕಮೆಂಟ್​ ಮಾಡಿದ್ದು ಆತನಿಗೆ ಇನ್ನಾದರೂ ಸಂಬಳ ಹೆಚ್ಚಿಸಿ ಎಂದು ಕಂಪನಿಗೆ ಮನವಿ ಮಾಡಿಕೊಂಡಿದ್ದಾರೆ.

ಹೀಗೆ ಪುಟ್ಟ ಸಂದರ್ಶನ ಮತ್ತು ಮುಗುಳು ನಗುವಿನ ಮೂಲಕ ವಿಡಿಯೋದಲ್ಲಿರುವುದು ಡೆಲವರಿ ಬಾಯ್​ ಸೋನು ಎಂಬಾತ. ಈತನ ನಗು ಈಗ ಎಲ್ಲ ಕಡೆ ಸಂತಸಕ್ಕೆ ಕಾರಣವಾಗಿದ್ದು, 35 ಸಾವಿರಕ್ಕು ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಸಾವಿರಾರು ಬಾರಿ ರೀಟ್ವೀಟ್​ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net