ಸಚಿವ ಜಮೀರ್ ಅಹ್ಮದ್​​ ಭರ್ಜರಿ ರೀಲ್ಸ್; ಟ್ವೀಟ್ ಮಾಡಿ ಟೀಕಿಸಿದ ಬಿಜೆಪಿ

zamirahamad
Published on

ಬೆಂಗಳೂರು: ಸಚಿವ ಜಮೀರ್​​ ಅಹಮ್ಮದ್ ತಮ್ಮ ಆಪ್ತರೊಂದಿಗೆ ಹಿಂದಿ ಹಾಡಿಗೆ ರೀಲ್ಸ್​​ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈ ವಿಡಿಯೋ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ  ರಾಜ್ಯ ಬಿಜೆಪಿ ಆಕ್ರೋಶ ಹೊರಹಾಕಿದೆ.

ರಾಜ್ಯ ಬಿಜೆಪಿ, ರಾಜ್ಯದಲ್ಲಿ ಡೆಂಘೀ ಮತ್ತು ಝೀಕಾ ವೈರಸ್​​​​ ಸಂಖ್ಯೆ ಹೆಚ್ಚಾಗುತ್ತಿದೆ.  ಆರೋಗ್ಯ ಮತ್ತು ಆರ್ಥಿಕ ತುರ್ತು ಪರಿಸ್ಥಿತಿಯನ್ನು  ಕರ್ನಾಟಕ ಎದುರಿಸುತ್ತಿದೆ. ಡೆಂಘೀ, ಝೀಕಾಗೆ ಸುಮಾರು 7 ರಿಂದ 8 ಮಕ್ಕಳು ಸಾವನ್ನಪ್ಪಿರುವ ವರದಿ ಇದೆ. ತರಕಾರಿ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ತರಕಾರಿ ಇಲ್ಲದೇ ಊಟ ನೀಡಲಾಗುತ್ತಿದೆ. ಅದರೆ ಸಚಿವರೊಬ್ಬರು ರೀಲ್ಸ್​​ ಮಾಡುತ್ತಾ ಮಜಾ ಮಾಡುತ್ತಿದ್ದಾರೆ.

ರೈತರು ಪೂರೈಸಿದ ಡೈರಿ ಹಾಲಿನ ಹಣವನ್ನು ಇನ್ನೂ ಪಾವತಿಸಿಲ್ಲ. ಇತರೆ ಪ್ರಮುಖ ನಾಯಕರು ವಾಲ್ಮಿಕಿ ಮತ್ತು ದಲಿತರ ಮೀಸಲು ಹಣವನ್ನು ಲೂಟಿ ಮಾಡುತ್ತಿದ್ದರೆ, ಇತರರು ಈಜುಕೊಳದಲ್ಲಿ ಆನಂದಿಸುತ್ತಿದ್ದಾರೆ. ಇಂದು ಮತ್ತೊಬ್ಬ ಸಚಿವರು ಇನ್​ಸ್ಟಾಗ್ರಾಮ್​​ ರೀಲ್ಸ್​ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಬಿಜೆಪಿ ಕಿಡಿಕಾರಿ ಟ್ವೀಟ್​​ ಮಾಡಿದೆ. ಈ ಕುರಿತಾದ ವಿಡಿಯೋ ಸೋಶಿಯಲ್​​  ಮೀಡಿಯಾದಲ್ಲಿ ಸಖತ್​ ವೈರಲ್​​ ಆಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net