ಜಾಕಿರ್ ಹುಸೇನ್ ಮೊದಲ ಬಾರಿ ಸಂಗೀತ ಕಾರ್ಯಕ್ರಮಕ್ಕೆ ಪಡೆದ ಸಂಭಾವನೆ ಕೇವಲ 5 ರೂ.! ಹಣಕ್ಕಿಂತ ಕಲೆಗೆ ಬೆಲೆಕೊಟ್ಟ Zakir Hussain

zakir hussain
Published on

Zakir Hussain: ಖ್ಯಾತ ತಬಲಾ ವಾದಕ ಜಾಕೀರ್ ಹುಸೇನ್ (73) ಅವರ ನಿಧನದಿಂದ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ನಿಧನಕ್ಕೆ ಚಿತ್ರರಂಗ ಮತ್ತು ರಾಜಕೀಯ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಬಲಾ ವಾದಕನಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ.

ಜಾಕಿರ್ ಹುಸೇನ್ 1951 ರಲ್ಲಿ ಜನಿಸಿದರು. ತಂದೆಯ ಹೆಸರು ಜಾಕಿರ್ ಉಸ್ತಾದ್ ಅಲ್ಲಾ ರಖಾ. ಅವರು ಚಿಕ್ಕ ವಯಸ್ಸಿನಲ್ಲೇ ಸಂಗೀತದಲ್ಲಿ ತರಬೇತಿ ಪಡೆದರು, ಅವರು 12 ನೇ ವಯಸ್ಸಿನಲ್ಲಿ ಸಾರ್ವಜನಿಕ ಪ್ರದರ್ಶನಗಳನ್ನು ನೀಡಲು ಪ್ರಾರಂಭಿಸಿದರು. ವಿದೇಶಗಳಲ್ಲಿಯೂ ಸಂಗೀತ ಕಛೇರಿಗಳನ್ನು ನಡೆಸಿದ್ದರು. ಜಾಕಿರ್ ಹುಸೇನ್ ವಿದೇಶದಲ್ಲಿ ಮೊದಲ ಸಂಗೀತ ಕಾರ್ಯಕ್ರಮಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ? ಕೇವಲ 5 ರೂಪಾಯಿ.

ವರ್ಷಗಳು ಕಳೆದಂತೆ ಜಾಕೀರ್ ಹುಸೇನ್ ಹಂತ ಹಂತವಾಗಿ ಬೆಳೆದರು. ಪ್ರತಿ ಪ್ರದರ್ಶನಕ್ಕೆ 5 ರಿಂದ 10 ಲಕ್ಷ ರೂಪಾಯಿ ಸಂಭಾವನೆ ತೆಗೆದುಕೊಂಡಿದ್ದಾರೆ. ಆದರೆ ಜಾಕಿರ್ ಹುಸೇನ್ ಕಲೆಗೆ ಹಣಕ್ಕಿಂತ ಹೆಚ್ಚು ಬೆಲೆ ನೀಡಿದ್ದರು. ಆದುದರಿಂದಲೇ ಅವರು ಹೆಚ್ಚು ಸಂಪತ್ತನ್ನು ಕೂಡಿಹಾಕಿಲ್ಲ ಎನ್ನಲಾಗುತ್ತದೆ. ಜಾಕಿರ್ ಹುಸೇನ್ ಅವರ ಒಟ್ಟು ಆಸ್ತಿ 8 ರಿಂದ 10 ಕೋಟಿ ರೂಪಾಯಿ ಎಂದು ವರದಿಯಾಗಿದೆ.

ಜಾಕಿರ್ ಹುಸೇನ್ ಅವರಿಗೆ 1998 ರಲ್ಲಿ ಪದ್ಮಶ್ರೀ ಮತ್ತು 2002 ರಲ್ಲಿ ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಿ ಸಂಗೀತ ಲೋಕಕ್ಕೆ ಅವರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು. ಗ್ರ್ಯಾಮಿ ಪ್ರಶಸ್ತಿಯನ್ನೂ ಗೆದ್ದಿದ್ದಾರೆ.

ಜಾಕಿರ್ ಹುಸೇನ್ ಅನಾರೋಗ್ಯ ಕಾರಣದಿಂದಾಗಿ ಕಳೆದ ಕೆಲವು ಸಮಯದಿಂದ ಹೊರಗುಳಿದಿದ್ದಾರೆ. ಇದೀಗ ಅವರ ನಿಧನದಿಂದ ಸಂಗೀತಾಭಿಮಾನಿಗಳು ಕಂಬನಿ ಮಿಡಿದಿದ್ದಾರೆ.  ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕಮಲ್ ಹಾಸನ್ ಸೇರಿದಂತೆ ಹಲವು ಚಿತ್ರರಂಗ ಮತ್ತು ರಾಜಕೀಯ ಗಣ್ಯರು ಜಾಕಿರ್ ಹುಸೇನ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net