ಹೊಲಿಗೆ ಕಲಿಯುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗನ ಪತ್ನಿ! ಯಾಕೆ ಗೊತ್ತಾ? Dhanashree Verma

dhanashree verma (1)
Published on

ನವದೆಹಲಿ: ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರ ಪತ್ನಿ ಧನಶ್ರೀ ವರ್ಮಾ ( Dhanashree Verma ). ನೃತ್ಯ ಸಂಯೋಜಕರಾಗಿ ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವಿಯಾಗಿಯೂ ಮಿಂಚುತ್ತಿದ್ದಾರೆ.ಸೋಷಿಯಲ್ ಮೀಡಿಯಾದಲ್ಲಿ ಸಂಪೂರ್ಣ ಸಕ್ರಿಯರಾಗಿರುವವರಲ್ಲಿ ಧನಶ್ರೀ ವರ್ಮಾ ಕೂಡ ಒಬ್ಬರು.

ಪ್ರಸಿದ್ಧ ಯೂಟ್ಯೂಬರ್ ಮತ್ತು ನೃತ್ಯ ಸಂಯೋಜಕಿಯಾಗಿ, ಅವರು ಹಲವಾರು ಅಭಿಮಾನಿಗಳನ್ನು ಗಳಿಸಿದ್ದಾರೆ ಮತ್ತು ಇತ್ತೀಚೆಗೆ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಧನಶ್ರೀ ವರ್ಮಾ ಅದರಲ್ಲಿ ಹೊಲಿಗೆ ಯಂತ್ರದೊಂದಿಗೆ ಪೋಸ್ ನೀಡಿದ್ದಾರೆ. ಈ ಫೋಟೋ ವೈರಲ್​ ಆಗುತ್ತಿದ್ದಂತೆ ಅತ್ತಿಗೆ ಏನಾಯ್ತು? ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.

ಧನಶ್ರೀ ವರ್ಮಾ ಇತ್ತೀಚೆಗೆ ಹೊಲಿಗೆ ಯಂತ್ರವನ್ನು ಬಳಸುತ್ತಿರುವ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆದ್ರೆ ಯಾಕೆ ಹಾಗೆ ಪೋಸ್ ಕೊಟ್ಟಿದ್ದಾಳೆ ಅನ್ನೋದು ಗೊತ್ತಿಲ್ಲ..ಆದರೆ ಇದೀಗ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆರ್‌ಸಿಬಿ ಜರ್ಸಿಯನ್ನು ಚಹಾಲ್ ಭೈಯಾಗೆ ಹೊಲಿದ್ರಾ? ಎಂದು ಕೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net