

ಮುಂಬೈ: ಸ್ಯಾಂಡಲ್ವುಡ್ ನಟ ಗಣೇಶ್ ಅಭಿನಯದ ಮಳೆಯಲಿ ಜೊತೆಯಲಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ನಟ ಯುವಿಕಾ ಚೌಧರಿ ದಂಪತಿ ಮೊದಲ ಮಗುವಿನ ನೀರಿಕ್ಷೆಯಲ್ಲಿದ್ದಾರೆ.
ಹಿಂದಿ ಬಿಗ್ ಬಾಸ್ ಮನೆಯಿಂದ ಪ್ರಿನ್ಸ್ ನರುಲಾ ಮತ್ತು ಯುವಿಕಾ ಚೌಧರಿ ಅವರ ಪ್ರೇಮಕಥೆ ಪ್ರಾರಂಭವಾಯಿತು. ಕಾರ್ಯಕ್ರಮದಿಂದ ಹೊರಬಂದ ನಂತರ, ಇಬ್ಬರೂ 2018 ರಲ್ಲಿ ವಿವಾಹವಾದರು. 6 ವರ್ಷಗಳ ನಂತರ, ಅವರ ಜೀವನದಲ್ಲಿ ಹೊಸ ಅತಿಥಿ ಬರಲಿದ್ದಾರೆ, ಈ ಬಗ್ಗೆ ದಂಪತಿ ಮತ್ತು ಅವರ ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ.
ಅಮ್ಮನಾಗಲಿರುವ ಯುವಿಕಾ ಚೌಧರಿ ಅವರು ಇತ್ತೀಚಿಗೆ ಗ್ರ್ಯಾಂಡ್ ಆಗಿ ಬೇಬಿ ಶವರ್ ಸಮಾರಂಭವನ್ನು ನಡೆದಿದ್ದಾರೆ. ಈ ಕಾರ್ಯಕ್ರಮದ ಕೆಲವು ಚಿತ್ರಗಳು ಮತ್ತು ವೀಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಯುವಿಕಾ ಚೌಧರಿ ಬೇಬಿ ಶವರ್‌ನಲ್ಲಿ ಬಿಳಿ ಡ್ರೆಸ್‌ನಲ್ಲಿ ಬಾರ್ಬಿ ಗೊಂಬೆಯಂತೆ ಕಾಣುತ್ತಿದ್ದರು. ಯುವಿಕಾ ಅವರ ಪತಿ ಪ್ರಿನ್ಸ್ ನರುಲಾ ಈ ವಿಶೇಷ ಸಂದರ್ಭದಲ್ಲಿ ಬಿಳಿ ಪ್ಯಾಂಟ್‌ನೊಂದಿಗೆ ನೀಲಿ ಟೋನ್ ಶರ್ಟ್ ಧರಿಸಿದ್ದರು. ಯುವಿಕಾ ಚೌಧರಿ ಅವರ ಬೇಬಿ ಶವರ್‌ಗೆ ಕುಟುಂಬ ಸದಸ್ಯರಲ್ಲದೆ, ಅನೇಕ ಸೆಲೆಬ್ರಿಟಿಗಳು ಸಹ ಭಾಗವಹಿಸಿದ್ದರು.