

ನವದೆಹಲಿ:2025ರ ದೆಹಲಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 'ಯುವ ಉಡಾನ್ ಯೋಜನೆಯಡಿ' ದೆಹಲಿ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 8,500 ರೂ.ನೀಡಲಿದ್ದೇವೆ ಎಂದು ಭಾನುವಾರ ಕಾಂಗ್ರೆಸ್ ಘೋಷಿಸಿದೆ.
ಕಾಂಗ್ರೆಸ್ ನಾಯಕ ಮತ್ತು ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ರ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಹೊಸ ಯೋಜನೆಯ ಭರವಸೆ ನೀಡಿದರು. ಅಲ್ಲದೆ, ಈ ಯೋಜನೆ ಯುವ ನಿರುದ್ಯೋಗಿಗಳಿಗೆ ಮತ್ತು ಮನೆಯಲ್ಲಿ ಕೂತು ಪಡೆಯುವ ಯೋಜನೆಯಲ್ಲ ಎಂದು ಸ್ಪಷ್ಟಪಡಿಸಿದರು.
ಕಂಪನಿ, ಕಾರ್ಖಾನೆ. ಸಂಸ್ಥೆ ಸೇರಿದಂತೆ ಇತರ ಖಾಸಗಿ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಯುವಕರು ಸಿದ್ಧರಿರಬೇಕು. ಈ ಕಂಪನಿಗಳ ಮೂಲಕ ಟ್ರೈನಿಂಗ್ ತಗೆದುಕೊಳ್ಳಬೇಕು. ಟ್ರೈನಿಂಗ್ ಸಮಯದಲ್ಲಿ ಕಂಪನಿ ಮೂಲಕ 8,500 ರೂ. ಪ್ರತಿ ತಿಂಗಳು ಪಡೆಯಬಹುದು ಎಂದು ಪೈಲಟ್ ಹೇಳಿದರು. ನಮ್ಮ ಪಕ್ಷ ಅಧಿಕಾರ ಹಿಡಿದ ತಕ್ಷಣ ಈ ಯೋಜನೆ ಸೇರಿ ವಿವಿಧ ಯೋಜನೆಗಳನ್ನು ಕರ್ನಾಟಕ ಸರ್ಕಾರ ಮಾದರಿಯಲ್ಲಿ ಮಾಡಲಿದೆ ಎಂದರು.
ಇನ್ನೂ ಇದೇ ಫೆ.5ರಂದು ದೆಹಲಿಯ 70 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಫೆ.8ಕ್ಕೆ ಫಲಿತಾಂಶ ಹೊರ ಬೀಳಲಿದೆ. ಈ ನಡುವೆ ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೇ ನೇರ ಹಣಾಹಣಿ ಏರ್ಪಟ್ಟಿದೆ.ಪ್ರತಿ ಪಕ್ಷಗಳು ಅಧಿಕಾರ ಹಿಡಿಯು ಉದ್ದೇಶದಿಂದ ಮೂರು ಪಕ್ಷಗಳು ಮತದಾರರ ತಮ್ಮತ್ತ ಸೆಳೆಯಲು ಭಾರೀ ಕಸರತ್ತು ಮಾಡಿವೆ. ಅಲ್ಲದೆ, ವಿಶೇಷ ಪ್ರಣಾಳಿಕೆಗಳನ್ನು ಕೂಡ ಬಿಡುಗಡೆ ಮಾಡಿವೆ. ಇದೀಗ ಕಾಂಗ್ರೆಸ್ ಕರ್ನಾಟಕ ಮಾದರಿಯಲ್ಲಿ ತುಸು ಅಧಿಕ ಫ್ರೀಗಳನ್ನೇ ಘೋಷಿಸಿದೆ.
ಹೌದು, ಅಧಿಕಾರದಲ್ಲಿರುವ ಆಮ್ ಆದ್ಮಿ ಪಾರ್ಟಿ ದೆಹಲಿಯ ಮಹಿಳೆಯರಿಗೆ ಈಗಾಗಲೇ 1 ಸಾವಿರ ರೂ. ನೀಡುತ್ತಿದೆ. ಮೂರನೇ ಬಾರಿಗೆ ಎಪಿ ಅಧಿಕಾರಕ್ಕೆ ಬಂದರೆ 2100 ನೀಡಲಾಗುವುದು ಎಂದು ಮಾಜಿ ಸಿಎಂ ಕೇಜ್ರಿವಾಲ್ ಭರವಸೆ ನೀಡಿದ್ದಾರೆ. ಅದರೆಂತೆ ಕಾಂಗ್ರೆಸ್ ಕೂಡ ಕರ್ನಾಟಕ ಮಾದರಿಯಲ್ಲಿ 2500 ರೂ. ನೀಡುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಯ ಸುದ್ದಿಗೋಷ್ಠಿಯಲ್ಲಿ ಭರವಸೆ ನೀಡಿದ್ದಾರೆ. ಅದರಂತೆ 250 ಲಕ್ಷ ರೂ. ಉಚಿತ ಆರೋಗ್ಯ ವಿಮೆ ಭರವಸೆ ಕಾಂಗ್ರೆಸ್ ನೀಡಿದೆ.(ಏಜೆನ್ಸೀಸ್)