

ನವದೆಹಲಿ:ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ ತಾಣಗಳಲ್ಲಿ ಒಂದಾಗಿರುವ ಯೂಟ್ಯೂಬ್ನಲ್ಲಿ ಇಂದು ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಎಲ್ಲೆಡೆ ಯೂಟ್ಯೂಬ್ ಸರ್ವರ್ ಡೌನ್ ಆಗಿದ್ದು, ಬಳಕೆದಾರರು ಹಾಗೂ ಕಂಟೆಂಟ್ ಕ್ರಿಯೆಟರ್ಗಳಿಗೆ ಅಡಚಣೆ ಉಂಟಾಗಿದೆ.
ಇಂದು ಜಗತ್ತಿನಾದ್ಯಂತ YouTube ಬಳಕೆದಾರರು ಹಾಗೂ ಕಂಟೆಂಟ್ ಕ್ರಿಯೆಟರ್ಗಳಿಗೆ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಅನ್ನು ಪ್ರವೇಶಿಸಲು ಸಾಧ್ಯವಾಗಿಲ್ಲ. ಬಳಕೆದಾರರು ಯೂಟ್ಯೂಬ್ಗೆ ಪ್ರವೇಶಿಸಲು, ವಿಡಿಯೋಗಳನ್ನು ವೀಕ್ಷಿಸಲು ಮತ್ತು ವಿಷಯವನ್ನು ಅಪ್‌ಲೋಡ್ ಮಾಡುವಲ್ಲಿ ಕೆಲವು ಸಮಯ ಸಮಸ್ಯೆಯನ್ನು ಎದುರಿಸಿದ್ದಾರೆ.
ಯೂಟ್ಯೂಬ್ ಸರ್ವರ್ ಡೌನ್ ಆಗಿರುವ ಕುರಿತಾಗಿ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನನ್ನ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನಗೆ ವಿಡಿಯೋಗಳನ್ನು ವೀಕ್ಷಿಸಲು ಆಗುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಈ ಕುರಿತಾಗಿ ಯೂಟ್ಯೂಬ್ ಕಂಪನಿಯು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದೆ.
ಯೂಟ್ಯೂಬ್ ಅಧಿಕೃತ ಖಾತೆ ಮೂಲಕವಾಗಿ ಕಂಪನಿ, "ಯೂಟ್ಯೂಬ್ ಬಳಕೆದಾರರು ಹಾಗೂ ಕಂಟೆಂಟ್ ಕ್ರಿಯೆಟರ್ಗಳು ವಿಡಿಯೋ ಅಪ್‌ಲೋಡ್ ಮಾಡಲು ಅಥವಾ ಯೂಟ್ಯೂಬ್ ವೀಕ್ಷಿಸಲು ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ನಮಗೆ ತಿಳಿದಿದೆ. ನಮ್ಮ ತಂಡವು ಪ್ರಸ್ತುತ ಸರಿಪಡಿಸುವಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೆಚ್ಚಿನ ಮಾಹಿತಿಗಾಗಿ ನೀವು ಈ ಲಿಂಕ್ ಅನುಸರಿಸಬಹುದು" ಎಂದು ಹೇಳಿದೆ.