ಸ್ನೇಹಿತರಿಗೆ ಕರೆ ಮಾಡಿ ಹೊಂಡಕ್ಕೆ‌ ಬಿದ್ದು ಯುವಕ ಆತ್ಮಹತ್ಯೆ

chikkabalapura jan 29 2020
Published on

ಚಿಕ್ಕಬಳ್ಳಾಪುರ: ಸ್ನೇಹಿತರಿಗೆ ಮೊಬೈಲ್​ ಕರೆ ಮಾಡಿ ಯುವಕನೊಬ್ಬ ಕಲ್ಲಂತರಾಯನ ಗುಡ್ಡದ ಹೊಂಡಕ್ಕೆ‌ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಗೌರಿಬಿದನೂರು ತಾಲೂಕಿನ ಚನ್ನಬೈರೇನಹಳ್ಳಿ ಗ್ರಾಮದ ಗಂಗರಾಜು(21) ಮೃತ ಯುವಕ.

ಗಂಗರಾಜು ಇತ್ತೀಚೆಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ. ಮಂಗಳವಾರ ರಾತ್ರಿ ತನ್ನ ಸ್ನೇಹಿತರಿಗೆ ಕರೆ ಮಾಡಿ ಕಲ್ಲಂತರಾಯನ ಗುಡ್ಡದ ಹೊಂಡಕ್ಕೆ‌ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದ. ಸ್ನೇಹಿತರು ಸ್ನೇಹಿತ ತಮಾಷೆಗೆ ಹೇಳಿರಬಹುದು ಎಂದು ಸುಮ್ಮನಾಗಿದ್ದರು. ಆದರೆ ಆತ ಮರುದಿನ ಕಾಣಿಸದ ಹಿನ್ನೆಲೆಯಲ್ಲಿ ಹೊಂಡದ ಬಳಿ ತೆರಳಿ ಪರಿಶೀಲಿಸಿದಾಗ ಆತನ ಮೊಬೈಲ್​ ಹಾಗೂ ಚಪ್ಪಲಿ ಪತ್ತೆಯಾಗಿತ್ತು.

ಕೂಡಲೇ ಗೌರಿಬಿದನೂರು ಠಾಣೆಗೆ ದೂರು ನೀಡಲಾಯಿತು. ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಜತೆ ಹೊಂಡದಲ್ಲಿ ಶೋಧನೆ ನಡೆಸಿ ಶವ ಪತ್ತೆ ಮಾಡಿದರು. ಪೊಲೀಸರು ಕೇಸು ದಾಖಲಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net