100 ರೂ. ನೋಟಿನ ಮೇಲೆ ಗಾಂಧಿ ಬದಲು ಶ್ರೀರಾಮನ ಚಿತ್ರ; ವಿಡಿಯೋ ವೈರಲ್

Sriram
Published on

ರಾಯ್​ಪುರ: ಕಲಾವಿದರು ತಮಗೆ ಸಿಗುವಂತಹ ವಸ್ತುಗಳನ್ನು ಇಟ್ಟುಕೊಂಡು ತಮ್ಮ ಕೈಚಳಕ ತೋರಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡುತ್ತಾರೆ. ಕೆಲವರು ಮಣ್ಣಿನಲ್ಲಿ, ಕಲ್ಲು ಬಂಡೆ, ದಿನಸಿ ಪದಾರ್ಥ, ಬಾಲೆ ಎಳೆ ಮೇಲೆ ತಮ್ಮ ಚಾಕಚಕ್ಯತೆಯನ್ನು ಪ್ರದರ್ಶಿಸುವ ಮೂಲಕ ತಾವು ಭಿನ್ನ ಎಂದು ತೋರ್ಪಡಿಸುತ್ತಾರೆ.

ಅದೇ ರೀತಿ ಇದೀಗ ಕಲಾವಿದರೊಬ್ಬರು, 100 ರೂ. ಮುಖಬೆಲೆಯ ನೋಟಿನ ಮೇಲೆ ಶ್ರೀರಾಮಚಂದ್ರನ ಚಿತ್ರ ಬಿಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಎಲ್ಲರ ಗಮನ ಸೆಳೆದಿದೆ. ಕಲಾವಿದನ ಕೈಚಳಕಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಕಲಾವಿದನೊಬ್ಬ 100 ರೂಪಾಯಿ ಮುಖಬೆಲೆಯ ನೋಟನ್ನು ತೆಗೆದುಕೊಂಡು ಗಾಂಧೀಜಿ ಭಾವಚಿತ್ರವಿರುವ ಜಾಗಕ್ಕೆ ಬಿಳಿ ಕ್ಯಾನ್ವಸ್ ಪೇಂಟ್ ಹಚ್ಚಿ ನಂತರ ಶ್ರೀ ರಾಮಚಂದ್ರನ ಫೋಟೋವನ್ನು ಬಿಡಿಸುತ್ತಾರೆ. ಈ ಮೂಲಕ ಶ್ರೀ ರಾಮಚಂದ್ರನ ಮೇಲೆ ತಮ್ಮಗಿರುವ ಭಕ್ತಿಯನ್ನು ಕಲಾವಿದ ಪ್ರದರ್ಶಿಸಿದ್ದಾರೆ.

ಇತ್ತ ಈ ವಿಡಿಯೋ ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಕಮೆಂಟ್ಸ್​ ಮೂಲಕ ಕಲಾವಿದನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ಕಲಾವಿದನ ಕಾರ್ಯವನ್ನು ಮೆಚ್ಚಿದರೆ ಹಲವರು ನೋಟಿನ ಮೇಲೆ ಈ ರೀತಿ ಚಿತ್ರ ಬಿಡಿಸುವುದು ತಪ್ಪು ಎಂದು ಕಮೆಂಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net