

Free Beer: ಸಾಮಾಜಿಕ ಮಾಧ್ಯಮ ಪ್ರಭಾವಿಯಾದ ಯೂಟ್ಯೂಬರ್ ಸಚಿನ್ ಸೇರಿ ಇತರ ಯುವಕರು ಜೈಪುರ ನಗರದ ಪ್ರಮುಖ ರಸ್ತೆಗಳಲ್ಲಿ ಉಚಿತವಾಗಿ ಬಿಯರ್ ವಿತರಣೆ ಮಾಡುವ ವಿಡಿಯೋವೊಂದು ಸಖತ್ ವೈರಲ್ ಆಗಿದ್ದು, ಇದೀಗ ಸಚಿನ್ ಸೇರಿ 6 ಯುವಕರು ಪೊಲೀಸರ ಅತಿಥಿಯಾಗಿದ್ದಾರೆ.
ಇದನ್ನೂ ಓದಿ:ಸಂಸ್ಕಾರದಿಂದ ವಸ್ತು, ವ್ಯಕ್ತಿಗೆ ಶ್ರೇಷ್ಠತೆ; ಗೌರಿಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ವಿಷಯವೇನು..? ಹೌದು, ಜೈಪುರದ ಮಾನಸ ಸರೋವರ ಪ್ರದೇಶದಲ್ಲಿ ಸಚಿನ್ ಜತೆ ಕೆಲ ಯುವಕರು ಸ್ಕಾರ್ಪಿಯೋ ಕಾರ್ನಲ್ಲಿ ಬಂದು ಬಿಯರ್ ಬಾಟಲ್ಗಳ ಓಪೆನ್ ಮಾಡಿ, ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳನ್ನು ನಿಲ್ಲಿಸಿ, ವಾಹನಗಳಲ್ಲಿದ್ದ ಜನರಿಗೆ ಹಾಗೂ ಚಾಲಕರಿಗೆ ವಿತರಣೆ ಮಾಡುತ್ತಿದ್ದಾರೆ. ಅಲ್ಲದೆ, ಕೆಲವರಿಗೆ ಅಲ್ಲೇ ಕುಡಿಯುವಂತೆ ಪ್ರೇರಿಪಿಸುತ್ತಿರುವ ವಿಡಿಯೋ ಅಪ್ಲೋಡ್ ಮಾಡುತ್ತಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಅಂದು ಏಕದಶಿ ದಿನವಾಗಿದೆ. ಇದರಿಂದ ಧಾರ್ಮಿಕ ಸಂಘಟನೆಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಪ್ರತಿಭಟನೆಯ ನಂತರ ಆರು ಜನರನ್ನು ಬಂಧಿಸಿದ್ದಾರೆ.
ವಿಡಿಯೋವನ್ನು ವೈರಲ್ ಮಾಡಿದ ಪ್ರಮುಖ ಆರೋಪಿ ಲಪ್ಪು ಸಚಿನ್ ಅಲಿಯಾಸ್ ಸಚಿನ್ ಸೇನ್ ಅವರನ್ನು ವಿಚಾರಣೆ ನಡೆಸಲಾಯಿತು. ಇದರ ಆಧಾರದ ಮೇಲೆ, ಅವರ ಸಹಚರರಾದ ಪ್ರದೀಪ್ ಕಡ್ವಾಸ್ರಾ, ವಿಕಾಸ್ ವರ್ಮಾ, ಅಭಿಷೇಕ್ ನಿರ್ಮಲ್, ಸುನಿಲ್ ಕುಮಾರ್, ಆದಿತ್ಯ ಮಹಾರಿಯಾ ಮತ್ತು ಅವರಿಗೆ ಸಹಾಯ ಮಾಡಿದ ಅಂಕಿತ್ ಅವರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಕ್ಷಮೇ ಕೇಳಿದ ಯೂಟ್ಯೂಬ್ ತಂಡ ನಾವು ಈ ವೀಡಿಯೊವನ್ನು ಯಾವುದೇ ಸಾರ್ವಜನಿಕರ ಭಾವನೆಗಳಿಗೆ ನೋವುಂಟು ಮಾಡಲು ಮಾಡಿಲ್ಲ, ಬದಲಾಗಿ ಸಾಮಾಜಿಕ ಮಾಧ್ಯಮದಲ್ಲಿ ಅನುಯಾಯಿಗಳನ್ನು ಹೆಚ್ಚಿಸಲು ಮಾಡಿದ್ದೇವೆ. ಇದರಿಂದ ನೋವುಂಟಾಗಿದ್ದರೆ ಎಲ್ಲರ ಬಳಿ ಕ್ಷಮೆಯಾಚಿಸುತ್ತೇವೆ ಎಂದು ಹೇಳಿದರು.(ಏಜೆನ್ಸೀಸ್)