13ರ ಯುವತಿ ಜತೆ ಲೈಂಗಿಕ ಚಾಟಿಂಗ್​! ಯುವಕನ ಬಂಧನ

dk (28)
Published on

ಪ್ಲೋರಿಡಾ: 13ರ ಯುವತಿ ಜತೆ ಲೈಂಗಿಕ ಚಾಟಿಂಗ್​ ನಡೆಸಿ ಲೈಂಗಿಕ ಕ್ರಿಯೆಗೆ ಪ್ರೇರೆಪಿಸಲು ಯತ್ನಿಸಿದ್ದಾನೆ ಎಂಬ ಆರೋಪದ ಮೇಲೆ ಅಮೆರಿಕಾದಲ್ಲಿ ಭಾರತೀಯ ಪ್ರಜೆಯನ್ನು ಬಂಧಿಸಲಾಗಿದೆ.

24 ವರ್ಷದ ಕೀರ್ತನ್​ ಪಟೇಲ್​​ ಎಂಬ ಯುವಕ 13ರ ಬಾಲಕಿ ಜತೆ ಲೈಂಗಿಕ ಚಾಟಿಂಗ್​ ಮಾಡಿರುವ ಆರೋಪಿ ಎಂದು ಗುರುತಿಸಲಾಗಿದೆ. ಅಲ್ಲದೇ, ಇತ ತಪ್ಪು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಪಟೇಲ್​ಗೆ ಅಂದಾಜು 10ವರ್ಷದ ವರೆಗೆ ಶಿಕ್ಷೆ ನೀಡಲಾಗುತ್ತದೆ ಅಥವಾ ಜೀವಾವಧಿ ಶಿಕ್ಷೆ ಪ್ರಕಟವಾಗಬಹುದು ಎಂದು ವರದಿಯಾಗಿದೆ. ಆದರೆ, ಕೋರ್ಟ್​ ಇನ್ನು ಯಾವುದೇ ತೀರ್ಪು ಕೊಟ್ಟಿಲ್ಲ.

ಇನ್ನು ಯುವತಿ ಅಲ್ಲಿ ಹೋಮ್​ಲ್ಯಾಂಡ್​ ಸೆಕ್ಯೂರಿಟಿ ಇನ್​ವೆಸ್ಟ್​ಗೇಷನ್​ನ​ ವಿಶೇಷ ಏಜೆಂಟ್​ ಎಂದು ಹೇಳಲಾಗಿದೆ. ಇದೇ ವರ್ಷದ ಮೇ ತಿಂಗಳಿಂದ ಅಕೆ ಜತೆಗೆ ಪಟೇಲ್​ ಚಾಟಿಂಗ್​ ಮಾಡುತ್ತಿದ್ದ. ರಹಸ್ಯವಾಗಿ ಲೈಂಗಿಕತೆಯ ಬಗ್ಗೆ ಕೇಳಿದ್ದ ಎನ್ನಲಾಗಿದೆ. ಯುವತಿ ವಿಶೇಷ ಏಜೆಂಟ್​ ಆಗಿದ್ದ ಕಾರಣದಿಂದ ಘಟನೆ ಕೂಡಲೇ ಹೊರ ಬಂದಿದೆ ಎಂದು ವರದಿ ಉಲ್ಲೇಖಿಸಿವೆ.

US ರಾಜ್ಯದ ಫ್ಲೋರಿಡಾದ ಉತ್ತರದದಲ್ಲಿ ಪ್ರದೇಶದ ಮೇರಿಯನ್ ಕೌಂಟಿಯ ಸ್ಥಳಕ್ಕೆ ಪ್ರಯಾಣಿಸಿದಾಗ ಪಟೇಲ್ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net