ಮದುವೆಯಾದ ಮೂರೇ ದಿನಕ್ಕೆ ಹತ್ಯೆಗೀಡಾದ ಯುವತಿ; ಅತ್ತೆ-ಮಾವನ ಮೇಲೆ ಅನುಮಾನ!

Crime
Published on

ಕೊಡಗು: ಮದುವೆಯಾದ ಮೂರೇ ದಿನಕ್ಕೆ ಯುವತಿಯೊಬ್ಬಳು ಅನುಮಾನಸ್ಪದ ರೀತಿಯಲ್ಲಿ ಕೊಲೆಯಾಗಿರುವ ಘಟನೆ ಕುಶಾಲನಗರ ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ. ಅಕ್ಷತಾ(18) ಸಾವನ್ನಪ್ಪಿದ ನವ ವಿವಾಹಿತೆ.

ಮೃತ ಅಕ್ಷತಾ ಕಳೆದ ಶುಕ್ರವಾರ ಪೋಷಕರ ವಿರೋಧದ ನಡುವೆ ಹೇಮಂತ್ ಎಂಬಾತನೊಂದಿಗೆ ಮೂರು ದಿನಗಳ ದೇವಾಲಯದಲ್ಲಿ ವಿವಾಹವಾಗಿದ್ದಳು. ಇದೀಗ ಮದುವೆಯಾದ ಮೂರೇ ದಿನಕ್ಕೆ ಅಕ್ಷತಾ ಗಂಡನ ಮನೆಯಲ್ಲಿ ಕೊಲೆಯಾಗಿ ಹೋಗಿದ್ದಾಳೆ.

ಇದೀಗ ಅಕ್ಷತಾಳ ಹೆತ್ತವರು ಆಕೆಯ ಅತ್ತೆ ಗಿರಿಜಾ, ಮಾವ ದಶರಥ ನಮ್ಮ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net