ಕೇರಳ ಲಾಟರಿಯಿಂದ 5 ಲಕ್ಷ ಗೆದ್ದಿರುವುದಾಗಿ ಯುವತಿಗೆ ಧೋಖಾ

lottery
Published on

ಬೆಂಗಳೂರು: ಕೇರಳ ಲಾಟರಿಯಲ್ಲಿ 5 ಲಕ್ಷ ರೂ. ಬಹುಮಾನ ಬಂದಿರುವುದಾಗಿ ಯುವತಿಗೆನಂಬಿಸಿದ ವಂಚಕರು, ಆಕೆಯಿಂದ 27,480 ರೂ. ಪಡೆದು ಮೋಸ ಮಾಡಿದ್ದಾರೆ.

ಬಸವನಗುಡಿ 26 ವರ್ಷದ ಯುವತಿ ವಂಚನೆಗೆ ಒಳಗಾಗಿರುವುದು. ಈಕೆ ಕೊಟ್ಟ ದೂರಿನ ಮೇರೆಗೆ ಬಸವನಗುಡಿ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.

ಜೂನ್ 25ರಂದು ಯುವತಿ ಮೊಬೈಲ್‌ಗೆ ಕರೆ ಮಾಡಿದ ರಾಕೇಶ್ ಕುಮಾರ್ ಆರ್ಯ ಎಂಬಾತ ನಿಮಗೆ ಕೇರಳ ಲಾಟರಿಯಲ್ಲಿ 5 ಲಕ್ಷ ರೂ. ಬಹುಮಾನ ಬಂದಿದೆ. ಈ ಹಣ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲು ಜಿಎಸ್‌ಟಿ ಶುಲ್ಕ ಪಾವತಿ ಮಾಡಬೇಕೆಂದು ಸಲಹೆ ಕೊಟ್ಟಿದ್ದಾನೆ. ಇದನ್ನು ನಂಬಿದ ಯುವತಿ, ವಂಚಕ ಕೊಟ್ಟ ವ್ಯಾಲೆಟ್ ನಂಬರ್‌ಗೆ 3 ಸಾವಿರ ರೂ., 4 ಸಾವಿರ ರೂ. ದಂತೆ ಹಂತ ಹಂತವಾಗಿ 27,480 ರೂ. ವರ್ಗಾವಣೆ ಮಾಡಿದ್ದಾಳೆ.

ಮತ್ತೆ ಹಣ ಕಳುಹಿಸುವಂತೆ ಒತ್ತಾಯ ಮಾಡುತ್ತಿದ್ದಾಗ ಅನುಮಾನ ಬಂದು ಯುವತಿ, ಹಣ ವಾಪಸ್ ಕೊಡುವಂತೆ ಕೇಳಿದ್ದಾಳೆ. ಆಗ ಆರೋಪಿ ಮೊಬೈಲ್ ಆ್ ಮಾಡಿಕೊಂಡಿದ್ದಾನೆ. ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಯುವತಿ, ಪೊಲೀಸ್ ಠಾಣೆಗೆ ಬಂದು ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net