VIDEO | ಪಿಸ್ತೂಲ್ ಬಳಸಿ ಕೇಕ್ ಕಟ್ ಮಾಡಿದ ಯುವಕ ಪೊಲೀಸರಿಂದ ಬಂಧನದ ಗಿಫ್ಟ್!

Arrest
Published on

ನವದೆಹಲಿ: ಅಂಕಿತ್ ಸಿಂಗ್ (21) ಎಂಬಾತ ತನ್ನ ಹುಟ್ಟುಹಬ್ಬದ ಸಂಭ್ರಮದಲ್ಲಿ ಎಡವಟ್ಟೊಂದು ಮಾಡಿಕೊಂಡು ಪೊಲೀಸರಿಂದ ಬಂಧಿತನಕ್ಕೊಳಪಟ್ಟಿದ್ದಾನೆ. ಇದಕ್ಕೆ ಕಾರಣ ಆತ ಕೇಕ್​ನ್ನು ಪಿಸ್ತೂಲ್​ನಿಂದ ಕಟ್​ ಮಾಡಿರುವುದು. ಪಿಸ್ತೂಲ್ ಬಳಸಿ ಕೇಕ್ ಕಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಿಸ್ತೂಲ್ ಬಳಸಿ ಕೇಕ್ ಕಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಕೂಡಲೇ ಅಂಕಿತ್ ಸಿಂಗ್​ನನ್ನು ಪತ್ತೆ ಮಾಡಿ ದೆಹಲಿಯ ನೆಬ್​ಸರೈ ಎಂಬಲ್ಲಿ ಬಂಧಿಸಿದ್ದಾರೆ. ಆತನಿಂದ 315 ಬೋರ್ ಕಂಟ್ರಿಮೇಡ್ ಪಿಸ್ತೂಲ್ ಮತ್ತು 2 ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಶಸ್ತ್ರಾಸ್ತ್ರ ಕಾಯ್ದೆ ಸೆಕ್ಷನ್ 25ರ ಅಡಿಯಲ್ಲಿ ತಪ್ಪಿತಸ್ಥ ಅಂಕಿತ್ ಸಿಂಗ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಂಕಿತ್ ಪಿಸ್ತೂಲ್ ಬಳಸಿ ಕೇಕ್ ಕಟ್ ಮಾಡುತ್ತಿರುವ ವಿಡಿಯೋವನ್ನು ದೆಹಲಿ ಪೊಲೀಸರು ಟ್ವಿಟರ್​ನಲ್ಲಿ ಶೇರ್ ಮಾಡಿದ್ದಾರೆ. ಸ್ವಯಂ ಪ್ರಕರಣದ ದಾಖಲಿಸಿ ಬಂಧಿಸಿರುವ ಪೊಲೀಸರ ಕ್ರಮಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net