ಲಿಫ್ಟ್‌ನಲ್ಲಿ ಮೂತ್ರ ವಿಸರ್ಜನೆ ಮಾಡಿದ ಯುವಕ: ಸಿಸಿಟಿವಿಯಲ್ಲಿ ಸೆರೆಯಾದ ಅಸಹ್ಯ ಕೃತ್ಯ ವೈರಲ್! Lift Viral Video

ಲಿಫ್ಟ್‌ನಲ್ಲಿ ಮೂತ್ರ ವಿಸರ್ಜನೆ ಮಾಡಿದ ಯುವಕನ ಅಸಹ್ಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಂಪೂರ್ಣ ವೈರಲ್ ಸುದ್ದಿಯ ವಿವರ ಇಲ್ಲಿದೆ.
A shocking CCTV still showing a man urinating inside a residential lift, triggering massive outrage across social media platforms.
ಸಿಸಿಟಿವಿಯಲ್ಲಿ ಸೆರೆಯಾದ ಅಸಹ್ಯ ಕೃತ್ಯ: ಅಪಾರ್ಟ್‌ಮೆಂಟ್ ಲಿಫ್ಟ್ ಒಳಗೆ ಯುವಕನೊಬ್ಬ ಅನುಚಿತವಾಗಿ ವರ್ತಿಸಿ ಮೂತ್ರ ವಿಸರ್ಜನೆ ಮಾಡಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Published on

ಘಾಜಿಯಾಬಾದ್​: ಅಪಾರ್ಟ್‌ಮೆಂಟ್​ಗಳಲ್ಲಿ ವಾಸಿಸುವುದು ಎಂದರೆ ಕೇವಲ ದುಬಾರಿ ಮನೆಗಳು ಮತ್ತು ಐಷಾರಾಮಿ ಸೌಲಭ್ಯಗಳಷ್ಟೇ ಅಲ್ಲ, ಅಲ್ಲಿ ಎಲ್ಲರೊಂದಿಗೆ ಹಂಚಿಕೊಳ್ಳುವ ಸಾರ್ವಜನಿಕ ಸ್ಥಳಗಳ ಬಗ್ಗೆ ಜವಾಬ್ದಾರಿ ಕೂಡ ಇರಬೇಕು. ಆದರೆ ಇಲ್ಲೊಬ್ಬ ಮಹಾನುಭಾವ ಮಾಡಿರುವ ಕೆಲಸ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶದ ಘಾಜಿಯಾಬಾದ್​ನಿಂದ ಹೊರಬಂದಿರುವ ಅಸಹ್ಯಕರ ವಿಡಿಯೋವೊಂದು ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

Also Read
'ಧುರಂಧರ್​' ಆಸ್ಕರ್​ ರೇಸ್​ನಿಂದ ಹೊರಗುಳಿಯಲು ಕಾರಣವೇನು? ನಿರ್ದೇಶಕ ಆದಿತ್ಯ ಧರ್​ ನೀಡಿದ ಅಚ್ಚರಿ ಹೇಳಿಕೆ ಇಲ್ಲಿದೆ...!​ Aditya Dhar
A shocking CCTV still showing a man urinating inside a residential lift, triggering massive outrage across social media platforms.

ಏನಿದು ಘಟನೆ?

ಘಾಜಿಯಾಬಾದ್‌ನ ಇಂದಿರಾಪುರದ ಪ್ರದೇಶದಲ್ಲಿರುವ ಶಿಪ್ರಾ ಕೃಷ್ಣ ವಿಸ್ಟಾ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಎಫ್-2 ಟವರ್‌ನ ಲಿಫ್ಟ್‌ನಲ್ಲಿ ಯುವಕನೊಬ್ಬ ಮೂತ್ರ ವಿಸರ್ಜನೆ ಮಾಡಿದ್ದಾನೆ. ಅಷ್ಟೇ ಅಲ್ಲ, ಲಿಫ್ಟ್ (Lift Viral Video) ವಿವಿಧ ಮಹಡಿಗಳಲ್ಲಿ ನಿಂತು ಬಾಗಿಲು ತೆರೆದರೂ, ಆ ವ್ಯಕ್ತಿ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತನ್ನ ಕೆಲಸವನ್ನು ಮುಂದುವರಿಸಿದ್ದಾನೆ.

ಒಂದು ಮಹಡಿಯಲ್ಲಿ ಲಿಫ್ಟ್ ಬಾಗಿಲು ತೆರೆದಾಗ ಮತ್ತೊಬ್ಬ ವ್ಯಕ್ತಿ ಒಳಗೆ ಬರಲು ಮುಂದಾಗಿದ್ದಾರೆ. ಆದರೆ ಒಳಗೆ ನಡೆಯುತ್ತಿರುವ ಅಸಹ್ಯಕರ ದೃಶ್ಯವನ್ನು ಕಂಡು ಅವರು ಒಳಗೆ ಬಾರದೆ ಹಿಂದಕ್ಕೆ ಸರಿದಿದ್ದಾರೆ. ಆದರೆ, ಆ ಯುವಕ ಯಾವುದೇ ನಾಚಿಕೆ ಇಲ್ಲದೆ ತನ್ನ ಮಹಡಿ ಬಂದಾಗ ಇಳಿದು ಹೋಗಿದ್ದಾನೆ.

ವಾಸನೆ ಬಂದಾಗ ಬಯಲಾಯ್ತು ಅಸಲಿ ರಹಸ್ಯ!

ಲಿಫ್ಟ್ ಒಳಗೆ ವಿಪರೀತ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ನಿವಾಸಿಗಳು, ಅಪಾರ್ಟ್ಮೆಂಟ್ ಮಾಲೀಕರ ಸಂಘ ಮತ್ತು ನಿರ್ವಹಣಾ ತಂಡಕ್ಕೆ ದೂರು ನೀಡಿದ್ದಾರೆ. ಕೂಡಲೇ ಎಚ್ಚೆತ್ತ ಆಡಳಿತ ಮಂಡಳಿ ಲಿಫ್ಟ್‌ನಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಈ ಕರಾಳತೆ ಬಯಲಾಗಿದೆ. ಈ ವಿಡಿಯೋ ಹೊರಬರುತ್ತಿದ್ದಂತೆ ಸೊಸೈಟಿಯ ನಿವಾಸಿಗಳು ಮತ್ತು ನೆಟ್ಟಿಗರು ಯುವಕನ ವರ್ತನೆಗೆ ಹಿಡಿಶಾಪ ಹಾಕಿದ್ದಾರೆ.

ಸಾರ್ವಜನಿಕ ಜಾಗಗಳೆಂದರೆ ನಮ್ಮದಲ್ಲವೇ?

ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳಲ್ಲಿ ಲಿಫ್ಟ್ ಅನ್ನು ದಿನವಿಡೀ ಮಕ್ಕಳು, ವೃದ್ಧರು, ಮಹಿಳೆಯರು ಬಳಸುತ್ತಾರೆ. ಇಂತಹ ಸೀಮಿತ ಮತ್ತು ಸಾರ್ವಜನಿಕ ಜಾಗಗಳಲ್ಲಿ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿರುತ್ತದೆ. ಆದರೆ ಕೆಲವರ ಈ ರೀತಿಯ ನಡವಳಿಕೆಯಿಂದ ಇಡೀ ಸಮಾಜವೇ ತಲೆ ತಗ್ಗಿಸುವಂತಾಗುತ್ತದೆ. ಲಿಫ್ಟ್ ಒಳಗೆ ಹೀಗೆ ಮಾಡುವುದರಿಂದ ಕೇವಲ ದುರ್ವಾಸನೆ ಮಾತ್ರವಲ್ಲ, ವಿದ್ಯುತ್ ಕಂಟ್ರೋಲ್ ಪ್ಯಾನೆಲ್ ಹಾಳಾಗಿ ದೊಡ್ಡ ಮಟ್ಟದ ಅಪಾಯವೂ ಸಂಭವಿಸಬಹುದಿತ್ತು.

ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆದ ನಂತರ, ಇಂಥವರಿಗೆ ಕನಿಷ್ಟ ಮಟ್ಟದ ಸಂಸ್ಕೃತಿಯೂ ಇಲ್ಲ ಎಂದು ನೆಟ್ಟಿಗರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳು ಇವೆ ಎನ್ನುವ ಭಯವೂ ಇಲ್ಲದೆ ಈ ರೀತಿಯ ವಿಕೃತಿ ಮೆರೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net