ಮಳವಳ್ಳಿ: ಪಟ್ಟಣದ ಖಾಸಗಿ ಲಾಡ್ಜ್‌ವೊಂದರಲ್ಲಿ ಯುವಕನೊಬ್ಬ ಮಂಗಳವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಾಲೂಕಿನ ಕುಂದೂರು ಗ್ರಾಮದ ಸಿದ್ದಪ್ಪ, ವಸಂತಮ್ಮ ದಂಪತಿ ಪುತ್ರ ಸುನೀಲ್(28) ಮೃತ ಯುವಕ. ಈತ ಗುರುವಾರ ರಾತ್ರಿ ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಖಾಸಗಿ ಲಾಡ್ಜ್‌ಗೆ ತೆರಳಿ ರೂಮ್ ಬಾಡಿಗೆ ಪಡೆದಿದ್ದ. ಮಧ್ಯಾಹ್ನ 12 ಗಂಟೆಯಾದರೂ ಕೊಠಡಿಯಿಂದ ಸುನೀಲ್ ಹೊರ ಬಾರದ ಹಿನ್ನೆಲೆಯಲ್ಲಿ ನಕಲಿ ಬೀಗ ಬಳಸಿ ನೋಡಲಾಗಿ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕೊಠಡಿ ಪಡೆಯುವಾಗ ಯುವಕ ನೀಡಿದ್ದ ಆಧಾರ್ ಕಾರ್ಡ್ ವಿಳಾಸದಿಂದ ಕುಟುಂಬದವರಿಗೆ ಮಾಹಿತಿ ನೀಡಲಾಗಿದ್ದು, ಪಟ್ಟಣದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡಸಿ ಮೃತದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದ್ದಾರೆ. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.