ಚಲಿಸುತ್ತಿರುವ ಬಸ್ಸಿನಲ್ಲಿ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟ ಯುವಕ! Moving Bus..

bus crime
Published on

ಆಂಧ್ರಪ್ರದೇಶ: ( Moving Bus ) ಚಲಿಸುತ್ತಿರುವ ಆರ್​​ಟಿಸಿ ಬಸ್​​ನಲ್ಲಿ ಅಪರಿಚಿತ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವುದು ಆತಂಕ ಮೂಡಿಸಿದ್ದಾನೆ. ಆಂಧ್ರಪ್ರದೇಶದ ಶ್ರೀಕಾಳಹಸ್ತಿಯಲ್ಲಿ ಈ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.

ಎರ್ಪೇಡು ಮಂಡಲದ ಅಂಜಿಮೇಡು ಬಳಿ ಯುವಕ ಬೆಳಿಗ್ಗೆ 5:30 ಕ್ಕೆ ಬಸ್ ಹತ್ತಿದ್ದಾನೆ. ಬೆಳಗಿನ ಬಸ್​ ಆಗಿರುವುದರಿಂದ ಹೆಚ್ಚಿನ ಪ್ರಯಾಣಿಕರು ಇರಲಿಲ್ಲ. ಕೇವಲ ನಾಲ್ವರು ಪ್ರಯಾಣಿಕರಿದ್ದರು. ಆ ವೇಳೆ  ಹಗ್ಗದಿಂದ ಬಸ್‌ನ ಮೇಲ್ಭಾಗಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಸ್ಸಿನ ಹಿಂಬದಿಯಲ್ಲಿ ಕುಳಿತಿದ್ದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುವಕ ನೇತಾಡುತ್ತಿರುವುದನ್ನು ಕಂಡು ಸಹ ಪ್ರಯಾಣಿಕರು ಕೂಡಲೇ ಕಂಡಕ್ಟರ್​ಗೆ ಹೇಳಿದ್ದಾರೆ.

ಚಾಲಕ ಬಸ್ ನಿಲ್ಲಿಸಿ ರೇಣಿಗುಂಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net