ವಿದ್ಯಾರ್ಥಿನಿಯೊಂದಿಗೆ ಸ್ನೇಹ: ಅಶ್ಲೀಲ ಫೋಟೋ ತೆಗೆದು ಬ್ಲಾಕ್ ಮೇಲ್ ಮಾಡಿದ ಯುವಕ

girl
ಸಾಂದರ್ಭಿಕ ಚಿತ್ರ
Published on

ಆಗ್ರಾ: ಯುವಕನೊಬ್ಬ ವಿದ್ಯಾರ್ಥಿನಿಯೊಂದಿಗೆ ಸ್ನೇಹ ಬೆಳೆಸಿ ಆಕೆಯ ಅಶ್ಲೀಲ ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

ರಾಜ್ ಎಂಬಾತನೇ ಈ ಕೃತ್ಯ ಎಸಗಿದ ಆರೋಪಿಯಾಗಿದ್ದು, ಆತ ಹರಿಪರ್ವತ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಬರುವ ಕಾಲೇಜಿನ ವಿದ್ಯಾರ್ಥಿನಿಯೊಂದಿಗೆ ಗೆಳೆತನವನ್ನು ಬೆಳೆಸಿದ್ದಾನೆ. ದಿನಗಳೆದಂತೆ ಇಬ್ಬರ ನಡುವೆ ಸ್ನೇಹವು ಆಳವಾಗಿ ಬೇರೂರಿದ್ದು, ಈ ನಡುವೆ ಆತ ಕದ್ದು ಮುಚ್ಚಿ ಆಕೆಯ ಅಶ್ಲೀಲ ಫೋಟೋಗಳನ್ನು ತೆಗೆದಿದ್ದ. ಇದಾದ ನಂತರ ಸುಮ್ಮನೀರದ ಆರೋಪಿಯು ಬ್ಲಾಕ್ ಮೇಲ್ ಮಾಡಿ ವಿದ್ಯಾರ್ಥಿನಿಯಿಂದ 50 ಸಾವಿರ ರೂ. ಪಡೆಯಲು ಸಫಲನಾಗಿದ್ದ.

ಇದಾದ ಕೆಲದಿನಗಳ ಬಳಿಕ ಆತ ಆಕೆಗೆ ಪದೇ ಪದೇ ಪೋಟೋ ಇಟ್ಟುಕೊಂಡು ಹಣ ವಸೂಲಿ ಮಾಡತೊಡಗಿದ್ದು, ಈ ನಡುವೆ ಆಕೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ತನಗೆ ಒಂದು ಲಕ್ಷ ರೂಪಾಯಿಗೆ ನೀಡುವಂತೆ ಬೇಡಿಕೆಯಿಟ್ಟಿದ್ದ. ಸದ್ಯ, ಪೋಟೋಗಳು ವೈರಲ್​ ಆದ ಬೆನ್ನಲ್ಲೇ ಆರೋಪಿ ವಿರುದ್ಧ ವಿದ್ಯಾರ್ಥಿನಿಯು ಪ್ರಕರಣ ದಾಖಲಿಸಿದ್ದಾಳೆ.

ಇಷ್ಟಕ್ಕೆ ಸುಮ್ಮನಾಗದ ಆರೋಪಿಯು ಆಕೆಯ ಸಹೋದರನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಬಂಧನಕ್ಕೆ ಯತ್ನಿಸುತ್ತಿದ್ದು, ಸದ್ಯ ಆತ ನಾಪತ್ತೆಯಾಗಿದ್ದಾನೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net