ಬೇರೊಬ್ಬ ಯುವಕನ ಜತೆಗಿನ ನಿಶ್ಚಿತಾರ್ಥ ಪ್ರಶ್ನಿಸಿದ್ದಕ್ಕೆ ಪ್ರಿಯತಮನಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಪ್ರೇಯಸಿ

Fire November
Published on

ದಾವಣಗೆರೆ: ಯುವತಿಯೊಬ್ಬಳು ತನ್ನ ಪ್ರಿಯತಮನಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರುವ ಘಟನೆ ಹರಪ್ಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದಲ್ಲಿ ನಡೆದಿದೆ.

ವಡ್ಡಿನಹಳ್ಳಿ ಗ್ರಾಮದ ಲಕ್ಷ್ಮಿ ಎಂಬ ಯುವತಿ ಪರಸಪ್ಪ ಎಂಬುವವರಿಗೆ ಬೆಂಕಿ ಹಚ್ಚಿದ್ದಾಳೆ.

ಲಕ್ಷ್ಮಿ ಹಾಗೂ ಪರಸಪ್ಪ 5 ವರ್ಷಗಳಿಂದ ಪರಸ್ವರ ಪ್ರೀತಿ ಮಾಡುತ್ತಿದ್ದರು. ಲಕ್ಷ್ಮಿಗೆ ಬೇರೊಬ್ಬ ಯುವಕನ ಜೊತೆ ಮದುವೆ ನಿಶ್ಚಿತಾರ್ಥ ನೆರವೇರಿತ್ತು. ಈ ಬಗ್ಗೆ ಚರ್ಚೆ ನಡೆಸಲು ಪರಸಪ್ಪ ಲಕ್ಷ್ಮಿ ಮನೆಗೆ ಹೋಗಿದ್ದ. ಇಬ್ಬರ ನಡುವೆ ವಾಗ್ವಾದ ನಡೆದು ಉದ್ರಿಕ್ತಗೊಂಡ ಲಕ್ಷ್ಮಿ ಮನೆಯಲ್ಲಿ ಸಂಗ್ರಹಿಸಿದ್ದ ಸೀಮೆಎಣ್ಣೆ ತಂದು ಪರಸಪ್ಪನ ಮೇಲೆ ಸುರಿದು ಬೆಂಕಿ ಹಚ್ಚಿದಳು. ಬೆಂಕಿಯ ಉರಿ ತಾಳಲಾರದೆ ಪರಸಪ್ಪ ಮನೆ ಪಕ್ಕದಲ್ಲಿದ್ದ ಹುಲ್ಲಿನ ಬಣವೆ ಮೈಉಜ್ಜಿಕೊಂಡು ಬೆಂಕಿ ಆರಿಸಿಕೊಳ್ಳಲು ಯತ್ನಿಸಿದ. ಬೆಂಕಿ ಹರಡಿ ಹುಲ್ಲಿನ ಬವಣೆಯೂ ನಾಶವಾಗಿದೆ.

ಗ್ರಾಮಸ್ಥರು ಯುವಕನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರು.

ಬೆಂಕಿ ಹಚ್ಚಿದ ಲಕ್ಷ್ಮಿ, ತಾಯಿ ಶಾರದಾಬಾಯಿ, ತಂದೆ ಚಕ್ರನಾಯ್ಕ ವಿರುದ್ಧ ಯುವಕನ ತಂದೆ ಅರಸೀಕೆರೆ ಪೊಲೀಸರಿಗೆ ದೂರು ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net