ನಿನ್ನೆ ಸಂಭ್ರಮದಲ್ಲಿದ್ದ ಯುವತಿ ಇಂದಿಲ್ಲ; ಸಂಬಂಧಿಕರ ಸಮಾರಂಭದಲ್ಲಿ ಕುಸಿದು ಬಿದ್ದು ಸಾವು..

Josna F
Published on

ಉಡುಪಿ: ಕುಸಿದು ಬಿದ್ದು ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಕಳೆದ ಒಂದೆರಡು ವರ್ಷಗಳಿಂದ ಹೆಚ್ಚಾಗಿ ಕಂಡುಬರುತ್ತಿದ್ದು, ಇಂದು ಕೂಡ ಅಂಥದ್ದೇ ಒಂದು ಪ್ರಕರಣಕ್ಕೆ ಯುವತಿಯೊಬ್ಬಳು ಬಲಿಯಾಗಿದ್ದಾಳೆ. ಸಂಬಂಧಿಕರ ಸಮಾರಂಭಕ್ಕೆ ಬಂದಿದ್ದ ಯುವತಿ ಸಂಭ್ರಮಿಸುತ್ತಲೇ ಸಾವಿಗೀಡಾಗಿದ್ದಾಳೆ.

ಉಡುಪಿ ಜಿಲ್ಲೆಯಲ್ಲಿ ಇಂಥದ್ದೊಂದು ದುರಂತ ನಿನ್ನೆ ಸಂಭವಿಸಿದೆ. ಜಿಲ್ಲೆಯ ಹಾವಂಜೆ ನಿವಾಸಿ ಜೋಸ್ನಾ ಲೂವಿಸ್ (23) ಸಾವಿಗೀಡಾದ ಯುವತಿ. ಕೊಳಲಗಿರಿಯಲ್ಲಿ ಸಂಬಂಧಿಕರು ಹಮ್ಮಿಕೊಂಡಿದ್ದ ರೋಸ್ ಸಮಾರಂಭಕ್ಕೆ ನಿನ್ನೆ ರಾತ್ರಿ ಬಂದಿದ್ದ ಈ ಯುವತಿ ಕುಸಿದು ಬಿದ್ದಿದ್ದಳು.

ನಿನ್ನೆ ರಾತ್ರಿ 8.30ರ ಸುಮಾರಿಗೆ ಸಂಭ್ರಮದಲ್ಲಿ ನಡೆದುಕೊಂಡು ಬರುತ್ತಿದ್ದ ಈಕೆ ಕುಸಿದು ಬಿದ್ದ ತಕ್ಷಣವೇ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದು ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಈಕೆ ಇಂದು ಸಾವಿಗೀಡಾಗಿದಳು. ಜೋಸ್ನಾ ಕುಸಿದು ಬಿದ್ದ ದೃಶ್ಯ ಮೊಬೈಲ್​ಫೋನ್​ಗಳಲ್ಲಿ ಸೆರೆಯಾಗಿದ್ದು, ಆ ದೃಶ್ಯಾವಳಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಲಾರಂಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net