

ಬೆಂಗಳೂರು: ಹುಡುಗ-ಹುಡುಗಿ ಜೊತೆಯಲ್ಲಿ ಕುಳಿತುಕೊಂಡರು ಅಂತಾ ಪೊಲೀಸ್ ಮಹಾಶಯನೊಬ್ಬ ಅವರಿಂದ 1000 ರೂ. ವಸೂಲಿ ಮಾಡಿರುವ ಘಟನೆ ನಗರದಲ್ಲಿ ನಡೆದಿದ್ದು, ಈ ರೀತಿಯ ದಾದಾಗಿರಿಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಸಂತ್ರಸ್ತ ಹುಡುಗ ಮತ್ತು ಹುಡುಗಿ ವಾಯುವಿಹಾರಕ್ಕೆಂದು ಹೊರಟ್ಟಿದ್ದರು. ಈ ವೇಳೆ ದಿಢೀರ್ ಎಂಟ್ರಿ ಕೊಟ್ಟ ಪೊಲೀಸಪ್ಪ ಬೆದರಿಕೆ ಹಾಕಿ ಆ ಜೋಡಿಯಿಂದ 1000 ರೂ. ವಸೂಲಿ ಮಾಡಿದ್ದಾರೆ. ನಗರದ ಕುಂದಲಹಳ್ಳಿ ಪಾರ್ಕ್ ಬಳಿ ಈ ಘಟನೆ ನಡೆದಿದೆ.
ಈ ಘಟನೆಯಿಂದ ಮನನೊಂದ ಯುವತಿ ಟ್ವಿಟರ್ ಮೂಲಕ ಬೆಂಗಳೂರು ನಗರದ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾಳೆ. ಹಣ ವಸೂಲಿ ಮಾಡಿದ ಪೊಲೀಸಪ್ಪನ ಬೈಕ್ ಸಮೇತ ಯುವತಿ ದೂರು ನೀಡಿದ್ದಾಳೆ. ನಾವೇನು ತಪ್ಪು ಮಾಡದಿದ್ದರೂ ನಮ್ಮ ಮೇಲೆ ನೈತಿಕ ಪೊಲೀಸ್ ಗಿರಿ ತೋರಲಾಗಿದೆ.
ಇದೀಗ ಪೊಲೀಸಪ್ಪ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಯಾವ ಕಾರಣಕ್ಕಾಗಿ ಅವರಿಂದ ಪೊಲೀಸ್ ಸಿಬ್ಬಂದಿ ಹಣ ವಸೂಲಿ ಮಾಡಿದರು. ಅಲ್ಲಿ ಏನು ತಪ್ಪು ನಡೆದಿದೆ. ಇಂತಹದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕೂಡಲೇ ಪೊಲೀಸ್ ಆಯುಕ್ತರು ಆ ಪೊಲೀಸ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಪೊಲೀಸ್ ಇಲಾಖೆ ಮತ್ತಷ್ಟು ನಂಬಿಕೆಯನ್ನು ಕಳೆದುಕೊಳ್ಳುತ್ತದೆ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. (ದಿಗ್ವಿಜಯ ನ್ಯೂಸ್)