ಜಾನಪದ ಕಲೆಯನ್ನು ಮುಂದಿನ ಪೀಳಿಗೆಗೆ ತಲುಪಿಸಲು ಯುವ ಪೀಳಿಗೆ ಶ್ರಮಿಸಬೇಕು: ಜಾನಪದ ಅಧ್ಯಕ್ಷ ಎಸ್.ಬಾಲಾಜಿ ಕರೆ.

janapada
Published on

ಬೆಂಗಳೂರು: ಜಾನಪದ ಜಾತ್ಯಾತೀತ ಮತ್ತು ಧರ್ಮಾರ್ಥಿತವಾಗಿದ್ದು ಕೃಷಿ ಸಂಸ್ಕೃತಿಯಿಂದ ಉಗಮವಾಗಿದೆ.ಇದನ್ನು ಉಳಿಸಿ ಬೆಳೆಸಿದ ಹೆಗ್ಗಳಿಕೆ ಮಹಿಳೆಯರಿಗೆ ಸಲ್ಲುತ್ತದೆ. ಹೀಗಾಗಿ ದಾಖಲೀಕರಣ ಮತ್ತು ತರಬೇತಿಯ ಮೂಲಕ ಮುಂದಿನ ಪೀಳಿಗೆ ಇದನ್ನು ವರ್ಗಾಯಿಸಬೇಕಾಗಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಎಸ್.ಬಾಲಾಜಿ ತಿಳಿಸಿದ್ದಾರೆ.

ಕನ್ನಡ ಜಾನಪದ ಪರಿಷತ್ ನಗರದ ಡಾ.ರಾಜಕುಮಾರ್ ವಾರ್ಡ್‌ನ ಅಗ್ರಹಾರ ದಾಸರಹಳ್ಳಿಯ ಡಾ.ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದ ಸಭಾಂಗಣದಲ್ಲಿ ಆಯೋಜಿಸಿದ್ದ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ನೂತನ ಘಟಕವನ್ನು ಡೊಳ್ಳು ಬಾರಿಸುವ ಮೂಲಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಎಲ್ಲ ರೀತಿಯ ಕಲೆಗಳಿಗೂ ಮೂಲ ಜಾನಪದವಾಗಿದ್ದು. ಇದನ್ನು ಯುವ ಜನರು ,ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಜತೆಗೆ ಮುಂದಿನ ಪೀಳಿಗೆಗೂ ಇದು ಮಾದರಿಯಾಗುವಂತೆ ಇಂದಿನ ಪೀಳಿಗೆ ಸಹಕಾರ ನೀಡಬೇಕು ಎಂದು ಕರೆ ನೀಡಿದರು.

ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷ ಡಾ. ರಿಯಾಜ್ ಪಾಷಾ ಮಾತನಾಡಿ ಕನ್ನಡ ಜಾನಪದ ಸಂಸ್ಕೃತಿಯ ಭಾಗವಾದ ಜಾನಪದ ಕಲೆ ಮತ್ತು ಜಾನಪದ ಕಲಾವಿದರು ಕನ್ನಡನಾಡಿನ ಅಸ್ಮಿತೆ. ನಮ್ಮ ಸಂಸ್ಕೃತಿಯ ಪ್ರತೀಕವಾಗಿರುವ ಜಾನಪದ ಸೊಬಗಿನಿಂದ ದೂರಾಗುತ್ತಿದ್ದಾರೆ. ಇದು ಸರಿಯಲ್ಲ ನಮ್ಮ ಶ್ರೀಮಂತ ಸಂಸ್ಕೃತಿಯನ್ನು ಹೊರ ಜಗತ್ತಿಗೆ ಪರಿಚಯಿಸಲು ಯುವ ಜನರು ದೇಸಿ ಸಂಸ್ಕೃತಿಯನ್ನು ಅಳವಡಿಸಿಕೊಂಡು ಜಾನಪದ ಕಲೆ ಮತ್ತು ಸಂಸ್ಕೃತಿಗೆ ನೆರವಾಗಬೇಕು ಎಂದು ಸಲಹೆ ನೀಡಿದರು.

ಅಳಿವಿನಂಚಿನಲ್ಲಿರುವ ಜಾನಪದ ಕಲೆಗಳನ್ನು ಮತ್ತೇ ನಮ್ಮ ನಾಡಿನ ಸಂಸ್ಕೃತಿ, ಸಂಪ್ರದಾಯ, ಪರಂಪರೆ ಬಿಂಬಿಸುವ ಜನಪದ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವುದರ ಮೂಲಕ ಉಳಿಸಿ ಬೆಳೆಸಬೇಕು ಹಾಗೂ ರಾಜ್ಯಾಧ್ಯಕ್ಷರಾದ ಬಾಲಾಜಿ ರವರ ಆದೇಶದಂತೆ ಮುಂದಿನ ಡಿಸೆಂಬರ್ ತಿಂಗಳಲ್ಲಿ ನಡೆಯುವ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕನ್ನಡ ಜಾನಪದ ಪರಿಷತ್ತಿನ ಪ್ರಪ್ರಥಮ ಸಮ್ಮೇಳನವನ್ನು ಶಾಸಕ ಪ್ರಿಯಕಷ್ಣ ಅವರ ಅಧ್ಯಕ್ಷತೆಯಲ್ಲಿ ಅದ್ದೂರಿ ಸಮಾರಂಭ ಮಾಡಲು ನಾವೆಲ್ಲರೂ ಸೇರಿ ಶ್ರಮಿಸೋಣ ಎಂದು ಹೇಳಿದರು.

ಜಾನಪದ ಜೋಗಿ ಗುರುರಾಜ ಹೊಸಕೋಟೆ ಮಾತನಾಡಿ ಜಾನಪದ ಗ್ರಾಮೀಣ ಭಾಗದ ಜೊತೆಗೆ ನಗರದಲ್ಲಿಯೂ ಸಹ ಕನ್ನಡ ಜಾನಪದ ಪರಿಷತ್ ಜಾಗೃತಿ ಮೂಡಿಸುತ್ತಿರುವುದು ಪ್ರಶಂಸನೀಯ ಎಂದು ತಿಳಿಸಿದರು.

ಖ್ಯಾತ ಜಾನಪದ ಗಾಯಕರಾದ ಗುರುರಾಜ್ ಹೊಸಕೋಟೆ, ಏಕತಾರಿ ರಾಮಯ್ಯ, ಜೋಗಿಲ ಸಿದ್ದರಾಜು, ಸಂತವಾಣಿ ಸುಧಾಕರ್ , ಲಕ್ಷ್ಮಣ ನೆಲಸೊಗಡು, ಕುಮಾರಿ ಮನ್ವಿತ ಸುಧೀರ್ ಮಹದೇವ ಸ್ವಾಮಿ ಜಾನಪದ ಗೀತೆಗಳನ್ನು ಹಾಡಿ ರಂಜಿಸಿದರು. ಲಕ್ಷ್ಮಣ್ ನೆಲಸೊಗಡು ಮತ್ತು ತಂಡದಿಂದ ಡೊಳ್ಳು ಕುಣಿತ ಮತ್ತು ಯಕ್ಷಗಾನ ಪ್ರದರ್ಶನ ನೀಡಿದರು. ಚೈತ್ರ ಸಂದೇಶ್ ಸ್ಟಡಿ ಸೆಂಟರ್ ನ ಮಕ್ಕಳು ಜಾನಪದ ಹಾಡಿಗೆ ನೃತ್ಯ ಪ್ರದರ್ಶಿಸಿ ನೆರೆದಿದ್ದವರು ಗಮನೆ ಸೆಳೆದರು.

ಇದೇ ವೇಳೆ ಕನ್ನಡ ಜಾನಪದ ಪರಿಷತ್ತಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಘಟಕದ ಅಧ್ಯಕ್ಷರಾಗಿ ರ. ನರಸಿಂಹಮೂರ್ತಿ ಅವರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮಣ್ ನೆಲಸೊಗಡು.ಪದಾಧಿಕಾರಿಗಳಾಗಿ ಅಶ್ವಥ್ ನಾರಾಯಣಪ್ಪ, ಕೇಶವ್ ರಾಜ್, ಡಿ ಸಿ ಯತೀಶ್, ಅಭಿಷೇಕ್, ಶಿವಶಂಕರ್, ರಾಮಾಂಜನೇಯ ಮತ್ತಿತರರು ಆಧಿಕಾರ ಸ್ವೀಕರಿಸಿದರು.

ವೀಣಾ ವಾದಕಿ ಪದ್ಮ ನಾಗರಾಜ್, ಸಿದ್ಧರಂಗ ಪ್ರತಿಷ್ಠಾನ ಅಧ್ಯಕ್ಷೆ ರಂಗಮ್ಮ, ವಿಜಯನಗರ ವಿಧಾನಸಭಾ ಕ್ಷೇತ್ರದ ಕಸಾಪ ಅಧ್ಯಕ್ಷ ಉಮೇಶ್ ಚಂದ್ರ, ಕೆಪಿಸಿಸಿ ಕಾರ್ಮಿಕ ಘಟಕದ ಅಧ್ಯಕ್ಷ ಪುಟ್ಟಸ್ವಾಮಿ ಗೌಡ, ವಿಜಯ್ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ವಿಜಯಕುಮಾರ್, ರಾಜಾಜಿನಗರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮೋಹನ್ ಕುಮಾರ್, ರಂಗೋತ್ರಿ ಕೆ.ಹೆಚ್ ಕುಮಾರ್, ಪತ್ರಕರ್ತ ಬಿ ಎಸ್. ರಾಮಚಂದ್ರ, ಕೆಜೆವಿಎಸ್ ಅಧ್ಯಕ್ಷ, ಬಾಲಾಜಿ, ವಿವೇಕ ಚೇತನ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ರವಿದಾಸ್ ಬಿಂಡಿಗನವಿಲೆ, ಸಪ್ತಗಿರಿ ಎಜುಕೇಷನ್ ಮತ್ತು ಕಲ್ಚರಲ್ ಟ್ರಸ್ಟ್ ಕೆ ವಿ ಸಂದೀಪ್, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ರವಿಕಾಂತ್, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ನಾ.ಶ್ರೀಧರ್, ಬಾಲಾಜಿ, ವಾರ್ಡ್ ಅಧ್ಯಕ್ಷ ಪುರುಷೋತ್ತಮ್, ವಕೀಲ ಪರಮೇಶ್ವರ್, ಮುಖಂಡರಾದ ಲಿಂಗರಾಜು, ಎಂ. ನಾಗಮಣಿ, ಪರಮೇಶ್ವರ್ ಪ್ರೇಮಕುಮಾರ್, ಸಂತೋಷ್ ಕುಮಾರ್, ಪುರುಷೋತ್ತಮ್, ಕಣ್ಣಯ್ಯ, ನಂಜಪ್ಪ, ಆರಸು ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net