ಈ ಭಯಾನಕ ಸಂಗತಿ ತಿಳಿದ್ರೆ ಇನ್ಮುಂದೆ ನೀವು ಕೇಕ್​ ಮೇಲೆ ಸ್ಪಾರ್ಕ್ಲಿಂಗ್​ ಕ್ಯಾಂಡಲ್ಸ್ ಇಡುವುದೇ ಇಲ್ಲ!

Cake with Candles
Published on

ನವದೆಹಲಿ: ಹುಟ್ಟುಹಬ್ಬ ಮತ್ತು ಇತರ ಕಾರ್ಯಕ್ರಮಗಳಿಗೆ ಕೇಕ್ ಕತ್ತರಿಸುವಾಗ ಮೇಣದಬತ್ತಿಗಳನ್ನು ಊದುವುದು ಅನಾದಿ ಕಾಲದ ಸಂಪ್ರದಾಯ. ಆದರೆ, ಇತ್ತೀಚಿಗೆ ಒಂದು ರೀತಿಯ ಸ್ಪಾರ್ಕ್ಲಿಂಗ್ ಕ್ಯಾಂಡಲ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಎಲ್ಲರು ಇದನ್ನೇ ನೆಚ್ಚಿಕೊಂಡಿದ್ದು, ಇದನ್ನು ಖರೀದಿಸಿ ಕೇಕ್ ಮೇಲೆ ಇಡುತ್ತಾರೆ. ಆದರೆ, ಇದು ಎಷ್ಟು ಅಪಾಯಕಾರಿ ಎಂಬುದು ಎಷ್ಟೋ ಮಂದಿಗೆ ಗೊತ್ತಿಲ್ಲ. ಸಂಭ್ರಮಾಚರಣೆಯ ನಡುವಲ್ಲೇ ಭಯಾನಕ ಕೆಮಿಕಲ್ಸ್​​ ನಿಮ್ಮ ಹೊಟ್ಟೆ ಸೇರುತ್ತದೆ ಎಚ್ಚರ!

ಯಾವುದೇ ವಿಶೇಷ ಸಂದರ್ಭದಲ್ಲಿ ಕೇಕ್ ಕತ್ತರಿಸುವ ಮೊದಲು ಕೇಕ್​ ಮೇಲಿ ಇಟ್ಟಿರುವ ಕ್ಯಾಂಡಲ್​ ಅನ್ನು ಹಚ್ಚುತ್ತೇವೆ. ಇವುಗಳನ್ನು ಸ್ಪಾರ್ಕ್ಲಿಂಗ್​ ಕ್ಯಾಂಡಲ್ಸ್​ ಎಂದು ಕರೆಯಲಾಗುತ್ತದೆ. ಈ ಕ್ಯಾಂಡಲ್ಸ್​ ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂಬ ಸಂದೇಶವುಳ್ಳ ವಿಡಿಯೋಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋವನ್ನು 'ಅಶು ಘಾಯ್' ಹೆಸರಿನ ಇನ್‌ಸ್ಟಾಗ್ರಾಮ್ ಪೇಜ್​ನಲ್ಲಿ ಹಂಚಿಕೊಳ್ಳಲಾಗಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಬಿಳಿ ಕಾಗದದ ಮೇಲೆ ಸ್ಪಾರ್ಕ್ಲಿಂಗ್​ ಮೇಣದಬತ್ತಿಯನ್ನು ಬೆಳಗಿಸಲಾಗುತ್ತದೆ. ಈ ಕ್ಯಾಂಡಲ್ಸ್​ ಕಬ್ಬಿಣ, ತಾಮ್ರ, ಸತು, ಅಲ್ಯೂಮಿನಿಯಂ ಮತ್ತು ಮೆಗ್ನೀಸಿಯಮ್​ನಂತಹ ರಾಸಾಯನಿಕ ಅಂಶಗಳನ್ನು ಹೊಂದಿರುತ್ತವೆ. ಈ ಅಂಶಗಳು ಆಕ್ಸೈಡ್ ಮತ್ತು ಕಾರ್ಬೋನೇಟ್‌ಗಳಾಗಿ ಪರಿವರ್ತನೆಗೊಂಡು ಕ್ಯಾಂಡಲ್ಸ್​ನಿಂದ ಸ್ಪಾರ್ಕ್ ಹೊರಬರುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕ.

ಪ್ರಯೋಗದ ಕೊನೆಯಲ್ಲಿ ಬಿಳಿ ಕಾಗದದ ಮೇಲೆ ಕೆಲವು ಕಪ್ಪು ಪುಡಿಯನ್ನು ಕಾಣಬಹುದು. ಇದೇ ರೀತಿ ಕೇಕ್ ಮೇಲೆಯೂ ಇದು ಚೆಲ್ಲಿರುತ್ತದೆ. ಅದನ್ನು ಗಮನಿಸದೇ ತಿನ್ನುತ್ತೇವೆ ಎಂದು ಅಶು ಘಾಯ್ ವಿವರಿಸಿದರು. ಇಂತಹ ಕ್ಯಾಂಡಲ್​ಗಳನ್ನು ಕೇಕ್ ಮೇಲೆ ಇಡುವುದನ್ನು ತಪ್ಪಿಸುವುದು ಉತ್ತಮ ಎನ್ನುತ್ತಾರೆ ಅಶು ಘಾಯ್.

ಈ ವಿಡಿಯೋ ವೈರಲ್ ಆದ ನಂತರ ಹಲವರು ವಿಭಿನ್ನ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಬರ್ತಡೇ ಕೇಕ್ ಮೇಲೆ ಅದು ನಮ್ಮ ಕಣ್ಣು ಮುಂದೆಯೇ ಇಂಥದ್ದೊಂದು ಕೆಟ್ಟದ್ದು ಇರುವುದು ನಮಗೇ ಗೊತ್ತೇ ಇಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಈ ವಿಡಿಯೋವನ್ನು ಈಗಾಗಲೇ ನಾಲ್ಕು ಮಿಲಿಯನ್ ಜನರು ವೀಕ್ಷಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net