

Non Vegetarian : ಭಾರತವು ವಿವಿಧ ಭಾಷೆಗಳು, ಪಾಕಪದ್ಧತಿ, ಬಟ್ಟೆ, ಧರ್ಮ ಮತ್ತು ಸಂಸ್ಕೃತಿಗಳನ್ನು ಹೊಂದಿರುವ ವೈವಿಧ್ಯಮಯ ಜನರಿಗೆ ಅತ್ಯುತ್ತಮ ನೆಲೆಯಾಗಿದೆ. ವಿವಿಧತೆಯಲ್ಲಿ ಏಕತೆ ಕಾಣುವುದೇ ಭಾರತದ ವಿಶೇಷ. ಭಾರತೀಯ ಆಹಾರ ಪದ್ಧತಿ ವಿಶ್ವದಲ್ಲೇ ವಿಶೇಷ ಗಮನ ಸೆಳೆದಿದೆ. ಊಟಕ್ಕೆ ಘಮ ಮತ್ತು ಬಾಯಿ ರುಚಿ ನೀಡುವ ಮಸಾಲೆಗಳ ತವರೇ ನಮ್ಮ ಭಾರತ ಅನ್ನೋದನ್ನ ವಿಶೇಷವಾಗಿ ಹೇಳಬೇಕಿಲ್ಲ. ಇಲ್ಲಿನ ಒಂದೊಂದು ಖಾದ್ಯಕ್ಕೂ ಒಂದೊಂದು ಇತಿಹಾಸವಿದೆ.
ನಮ್ಮ ಭಾರತದಲ್ಲಿ ಎರಡು ರೀತಿಯ ಆಹಾರ ಪ್ರಿಯರಿದ್ದಾರೆ. ಒಂದು ಸಸ್ಯಾಹಾರಿ ಮತ್ತು ಇನ್ನೊಂದು ಮಾಂಸಾಹಾರಿ. ಅಚ್ಚರಿಯ ಸಂಗತಿ ಏನೆಂದರೆ, ನಮ್ಮ ದೇಶದಲ್ಲಿ ಮಾಂಸಾಹಾರಿಗಳ ಸಂಖ್ಯೆ ಸಸ್ಯಾಹಾರಿಗಳ ಸಂಖ್ಯೆಗಿಂತಲೂ ಹೆಚ್ಚಿದೆ. ಈ ಕುರಿತು ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ ಶೇ.85ಕ್ಕೂ ಹೆಚ್ಚು ಜನರು ಮಾಂಸಾಹಾರವನ್ನು ಇಷ್ಟಪಡುತ್ತಾರೆ.
ಹಾಗಾದರೆ, ಅತಿ ಹೆಚ್ಚು ಮಾಂಸಾಹಾರಿಗಳು ಇರುವ ರಾಜ್ಯ ಯಾವುದು ಗೊತ್ತಾ? ಅದು ಬೇರೆ ಯಾವುದೂ ಅಲ್ಲ, ನಾಗಾಲ್ಯಾಂಡ್ ರಾಜ್ಯ. ಇಲ್ಲಿನ ಶೇ.99.8 ರಷ್ಟು ಜನರು ಮಾಂಸಾಹಾರವನ್ನು ಇಷ್ಟಪಡುತ್ತಾರೆ.
ಈ ಪಟ್ಟಿಯಲ್ಲಿ ಪಶ್ಚಿಮ ಬಂಗಾಳ ರಾಜ್ಯ 2ನೇ ಸ್ಥಾನದಲ್ಲಿದೆ. ಇಲ್ಲಿನ ಶೇ.99.3ರಷ್ಟು ಜನರು ಮಾಂಸಾಹಾರ ಸೇವಿಸಲು ಇಷ್ಟಪಡುತ್ತಾರೆ. ಕೇರಳ ರಾಜ್ಯ 3ನೇ ಸ್ಥಾನದಲ್ಲಿದೆ. ಇಲ್ಲಿನ ಶೇ.99.1ರಷ್ಟು ಜನರು ಮಾಂಸಾಹಾರ ಸೇವಿಸುತ್ತಾರೆ. ಆಂಧ್ರಪ್ರದೇಶ 4ನೇ ಸ್ಥಾನದಲ್ಲಿದ್ದು, 98.25 ರಷ್ಟು ಜನರು ಮಾಂಸ ತಿನ್ನುತ್ತಾರೆ. ಈ ಪಟ್ಟಿಯಲ್ಲಿ ತಮಿಳುನಾಡು 6ನೇ ಸ್ಥಾನದಲ್ಲಿದೆ. 97.65 ರಷ್ಟು ಜನರು ಮಾಂಸಾಹಾರ ಇಷ್ಟಪಡುತ್ತಾರೆ. ಅದರಲ್ಲೂ ಚಿಕನ್ ಬಿರಿಯಾನಿ ಇವರ ನೆಚ್ಚಿನ ಸ್ಥಳೀಯ ಆಹಾರವಾಗಿದೆ.
ಒಡಿಶಾ ಏಳನೇ ಸ್ಥಾನದಲ್ಲಿದೆ. ಅದರ ಜನಸಂಖ್ಯೆಯ ಸರಿಸುಮಾರು 97.35 ಪ್ರತಿಶತದಷ್ಟು ಜನರು ಮಾಂಸಾಹಾರಕ್ಕೆ ಆದ್ಯತೆ ನೀಡುತ್ತಾರೆ. (ಏಜೆನ್ಸೀಸ್)