ಈ ಸರಣಿಯ 2 ರೂಪಾಯಿ ನಾಣ್ಯಗಳಿದ್ದರೆ ನೀವಾಗಬಹುದು ಲಕ್ಷಾಧಿಪತಿ?!

2 rupees
Published on

ನವದೆಹಲಿ: ನಾಣ್ಯಗಳ ಬಳಕೆ ಎರಡು ಸಾವಿರ ವರ್ಷಗಳ ಹಿಂದೆ ಆರಂಭವಾಯಿತು ಎಂದು ಇತಿಹಾಸ ಹೇಳುತ್ತದೆ. ಕಾಲಾನಂತರ ನಾಣ್ಯಗಳು ಸಹ ಬದಲಾಗುತ್ತಾ ಬಂದಿದೆ. ಓಲ್ಡ್​ ಇಸ್​ ಗೋಲ್ಡ್​ ಎಂದು ಹಿರಿಯರು ಹೇಳುವ ಮಾತಿನಂತೆ ಇಂದು ಹಳೆಯ ನಾಣ್ಯಗಳಿಗೂ ಭಾರಿ ಬೇಡಿಕೆ ಇದೆ.

ಹೌದು. 1994, 1995, 1997 ಮತ್ತು 2000 ಸರಣಿಯ ವಿಶೇಷವಾದ 2 ರೂಪಾಯಿ ನಾಣ್ಯಗಳಿಗೆ ಬಹುಬೇಡಿಕೆ ಬಂದಿದೆ. ನಿಮ್ಮ ಬಳಿ ಏನಾದರೂ ನಾಣ್ಯಗಳಿದ್ದರೆ ನೀವು ಲಕ್ಷಾಧಿಪತಿಯಾಗುವ ಸಾಧ್ಯತೆ ಇದೆ. ವಿಶೇಷವಾದ ನಾಣ್ಯಗಳನ್ನು ಮಾರಾಟ ಮಾಡಿ ಲಕ್ಷ ರೂಪಾಯಿ ಗಳಿಸಬಹುದಾಗಿದೆ.

ಎಲ್ಲಿ ಮತ್ತು ಹೇಗೆ?
1. ಮೊದಲು ಬೆಂಗಳೂರು ಮೂಲದ ಕ್ವಿಕ್ಕರ್​ ವೆಬ್​ಸೈಟ್​ನಲ್ಲಿ ರಿಜಿಸ್ಟರ್​ ಮಾಡಿಕೊಳ್ಳಬೇಕು.
2. ಬಳಿಕ ವಿಶೇಷವಾದ ಎರಡು ರೂಪಾಯಿ ನಾಣ್ಯದ ಫೋಟೋ ತೆಗೆದು ವೆಬ್​​ಸೈಟ್​ನಲ್ಲಿ ಅಪ್​ಲೋಡ್​ ಮಾಡಿ.
3. ಫೋಟೋ ಅಪ್​ಲೋಡ್​ ಮಾಡಿದ ಬಳಿಕ ನಿಮ್ಮ ಮೊಬೈಲ್​ ನಂಬರ್​ ಮತ್ತು ಈಮೇಲ್ ಅಥವಾ ವಾಸ ಸ್ಥಳದ ಮಾಹಿತಿ​ ನೀಡಬೇಕು. ನೀವು ನೀಡಿದ ಮಾಹಿತಿಯನ್ನು ವೆಬ್​ಸೈಟ್​ ವೆರಿಫೈ ಸಹ ಮಾಡಲಿದೆ.
4. ನೀವು ಅಪ್​ಲೋಡ್​ ಮಾಡಿದ ವಿಶೇಷ ಎರಡು ರೂಪಾಯಿ ನಾಣ್ಯವನ್ನು ನೋಡಿ ಯಾರಿಗಾದರೂ ಇಷ್ಟವಾದರೆ ನೇರವಾಗಿ ನಿಮಗೆ ಕರೆ ಮಾಡಿ ಅದನ್ನು ಕೊಂಡುಕೊಳ್ಳಲಿದ್ದಾರೆ. ಇದನ್ನೆಲ್ಲ ಮಾಡುವ ಮುನ್ನ ನೀವು ವೆಬ್​ಸೈಟ್​ನಲ್ಲಿರುವ ನಿಯಮಗಳನ್ನು ಒಮ್ಮೆ ಓದಿಕೊಳ್ಳುವುದು ಒಳಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net