ಮಂಕಿಪಾಕ್ಸ್​​ ಪ್ರಕರಣ ಹೆಚ್ಚಳ: ಆರೋಗ್ಯ ಇಲಾಖೆಗೆ ಸಿಎಂ ಯೋಗಿ ಖಡಕ್​​ ಸೂಚನೆ

Yogi
Published on

ಲಖನೌ: ಉತ್ತರ ಪ್ರದೇಶದಲ್ಲಿ ಮಂಕಿಪಾಕ್ಸ್​ ವೈರಸ್​ ಭೀತಿ ಹೆಚ್ಚಳವಾಗಿರುವುದರಿಂದ ತೀವ್ರ ಕಟ್ಟುನಿಟ್ಟಿನ ನಿಯಮ ಪಾಲಿಸಲು ಆರೋಗ್ಯ ಇಲಾಖೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ ಸೂಚಿಸಿದ್ದಾರೆ.

ಮಂಕಿಪಾಕ್ಸ್​​ ವೈರಸ್​ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ, ಈ ಬಗ್ಗೆ ನಿಯಮಗಳನ್ನು ಜಾರಿಗೆ ತಂದು ವೈರಸ್​ ಹರಡದಂತೆ ಕಟ್ಟೆಚ್ಚರ ವಹಿಸಬೇಕೆಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.ವೈರಸ್​ ಕುರಿತ ಕೇಂದ್ರ ಸರ್ಕಾರ ಕೂಡ ರಾಜ್ಯ ಸರ್ಕಾರಗಳಿಗೆ ನಿಯಮಾವಳಿಗಳನ್ನು ಜಾರಿಗೊಳಿಸಿದ್ದು, ಅದರ ಪಾಲನೆಯಾಗಬೇಕೆಂದು ಸಿಎಂ ತಿಳಿಸಿದ್ದಾರೆ.

ಒಂದು ಪ್ರಕರಣವೂ ರಾಜ್ಯದಲ್ಲಿ ದಾಖಲಾಗಬಾರದು, ವಿದೇಶಗಳಿಂದ ಬರುವವರ ಮೇಲೆ ಹದ್ದಿನ ಕಣ್ಣಿಡಬೇಕು, ಅವರ ತಪಾಸಣೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕೆಂದು ಸೂಚಿಸಿದ್ದಾರೆ. ಈ ಮದ್ಯೆ ಲಕ್ಷಣಗಳು ಕಂಡುಬಂದಲ್ಲಿ ಅಂತಹವರಿಗೆ ಕಡ್ಡಾಯ ರಕ್ತ ಪರೀಕ್ಷೆ ಮಾಡಿಬೇಕು, ಯಾರೇ ರೋಗಿಗಳು ಬಂದರೂ ಎಲ್ಲಾ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ನೀಡಲು ಸಿದ್ಧರಾಗಿರಬೇಕೆಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net