

ಹಾವೇರಿ: ಪ್ರಧಾನಿ ನರೇಂದ್ರ ಮೋದಿಯವರು 2015ರಲ್ಲಿ ಯೋಗ ದಿನಾಚರಣೆ ಆಚರಿಸಿದರು. ಯೋಗಾಸನದ ಮಹತ್ವ ತಿಳಿದ ಜಗತ್ತಿನ 183 ದೇಶಗಳು ಇಂದಿಗೂ ಯೋಗ ದಿನಾಚರಣೆ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಾ. ನಾಗರಾಜ ಹೇಳಿದರು.
ತಾಲೂಕಿನ ದೇವಗಿರಿ ಬಳಿಯ ಬಿ.ಎಂ. ಇಂಟರನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ಶನಿವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿವರ್ಷ ಒಂದೊಂದು ಘೋಷವಾಕ್ಯ ಇಟ್ಟುಕೊಂಡು ಯೋಗ ದಿನ ಆಚರಿಸುತ್ತಿದ್ದಾರೆ. ಸದೃಡ ದೇಹದಲ್ಲಿ ಸದೃಡ ಮನಸ್ಸು ಇರುವುದಕ್ಕೆ ಯೋಗ ಮಾಡಿ ಎಂದರು.
ಶಾಲೆಯ ಕಾರ್ಯದಶಿರ್ ಸಿದ್ಧರಾಜ ಕಲಕೋಟಿ ಮಾತನಾಡಿ, ಯೋಗಾಭ್ಯಾಸ ಮಕ್ಕಳು ನಿತ್ಯ ಮಾಡಬೇಕು. ನಿಮ್ಮ ಬೌದ್ಧಿಕ ಸಾಮರ್ಥ್ಯ, ನೈತಿಕ ಸ್ಥೆ$ರ್ಯ ಹೆಚ್ಚಿಸಲು ಬಹಳಷ್ಟು ಪ್ರಯೋಜನಕಾರಿಯಾಗಿದೆ ಎಂದರು.
ಅಂತಾರಾಷ್ಟ್ರೀಯ ಯೋಗ ಪಟು ಅಪೇಾ ಹಂಜಿ ಹಾಗೂ ಯೋಗ ಶಿಕ್ಷಕ ಬಸವರಾಜ ಹಂಜಿ ವಿವಿಧ ಯೋಗಾಸನ ತಿಳಿಸಿದರು.
ಎಸ್.ಪಿ. ಮಠದ, ಮೇರಿ ಸಿ.ಎಲ್. ಹಾಗೂ ಶಾಲೆಯ ಸಿಬ್ಬಂದಿ ಇದ್ದರು.