

ಥೈರಾಯ್್ಡ ಗ್ರಂಥಿಯು ಗಂಟಲಿನ ಸಣ್ಣ ಗ್ರಂಥಿಯಾಗಿದ್ದು ಅದು ಹಾರ್ವೇನುಗಳನ್ನು ಸ್ರವಿಸುತ್ತದೆ. ಈ ಹಾಮೋನುಗಳು ದೇಹದ ಬೆಳವಣಿಗೆ, ಉಷ್ಣತೆಯನ್ನು ಕಾಪಾಡುವುದು, ದೇಹದ ಅಂಗಾಂಶಗಳಿಗೆ ರಕ್ತಪರಿಚಲನೆ ಇತ್ಯಾದಿ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತವೆ. ಮಿದುಳಿನಲ್ಲಿರುವ ಪಿಟ್ಯುಟರಿ ಗ್ರಂಥಿ ಥೈರಾಯ್ಡ್ ಗ್ರಂಥಿಯನ್ನು ನಿಯಂತ್ರಿಸುತ್ತದೆ. ಒಬ್ಬ ವ್ಯಕ್ತಿಗೆ ಥೈರಾಯ್ಡ್ ಸಮಸ್ಯೆ ಇದ್ದಾಗ, ಅದು ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಒತ್ತಡವು ಹೆಚ್ಚಾಗುವುದು ಥೈರಾಯ್್ಡ ಸಮಸ್ಯೆಗಳಿಗೆ ಸಂಬಂಧಿಸಿದೆ. ಈ ಕಾರಣಕ್ಕಾಗಿ, ಯೋಗವು ಥೈರಾಯ್್ಡ ಆರೋಗ್ಯ ಸಮಸ್ಯೆಗಳಿಗೆ ಪ್ರಯೋಜನಕಾರಿಯಾಗಿದೆ.
ಥೈರಾಯ್ಡ್ ಗ್ರಂಥಿಯ ಮೇಲೆ ಪರಿಣಾಮ ಬೀರುವ ಎರಡು ಸಾಮಾನ್ಯ ಪರಿಸ್ಥಿತಿಗಳು ಹೀಗಿವೆ : ಹೈಪರ್ ಥೈರಾಯ್ಡಿಸಮ್ ಥೈರಾಯ್ಡ್ ಗ್ರಂಥಿಯು ಹೆಚ್ಚಿನ ಪ್ರಮಾಣದ ಥೈರಾಯ್್ಡ ಹಾರ್ವೇನುಗಳನ್ನು ಉತ್ಪಾದಿಸಿ ದಾಗ ಇದು ಸಂಭವಿಸುತ್ತದೆ. ಹೈಪರ್ ಥೈರಾಯ್ಡಿಸಮ್ ಮೂಲ ಕಾರಣ ವೇನೆಂದರೆ ಗ್ರೇವ್ಸ್ ಕಾಯಿಲೆ ಅಥವಾ ಅತಿಯಾದ ಥೈರಾಯ್ಡ್ ಹೈಪೋಥೈರಾಯ್ಡಿಸಮ್ ಇದು ಥೈರಾಯ್ಡ್ ಹಾರ್ವೇನ್ ಉತ್ಪಾದನೆಯು ತುಂಬಾ ಕಡಿಮೆಯಾದಾಗ, ಥೈರಾಯ್್ಡ ಗ್ರಂಥಿಯನ್ನು ಹಾನಿಗೊಳಗಾದ ಸ್ವಯಂ ನಿರೋಧಕ ಕಾಯಿಲೆಯಿಂದ ಸಂಭವಿಸುತ್ತದೆ.
ಯೋಗಾಭ್ಯಾಸದಿಂದ ಪರಿಣಾಮಕಾರಿ ಯಾಗಿ ನಿಭಾಯಿಸ ಬಹುದಾದ ಜೀವನಶೈಲಿಯ ಅಸ್ವಸ್ಥತೆಗಳಲ್ಲಿ ಥೈರಾಯ್ಡ್ ಕೂಡ ಒಂದು. ಥೈರಾಯ್ಡ್ ಸಮಸ್ಯೆಯ ನಿಯಂತ್ರಣಕ್ಕೆ ನಮ್ಮ ಭಾರತೀಯ ಸಂಸ್ಕೃತಿಯ ಯೋಗ, ವ್ಯಾಯಾಮ, ಮುದ್ರೆಗಳು, ಚಕ್ರ, ಬಣ್ಣಗಳ ಚಿಕಿತ್ಸೆ, ಧ್ಯಾನ ಸಹಕಾರಿಯಾಗುತ್ತದೆ. ಇದರಿಂದ ಥೈರಾಯ್ಡ್ ಗ್ರಂಥಿಯ ಆರೋಗ್ಯ ವರ್ಧನೆಯಾಗುವುದು ಸಮರ್ಪಕವಾಗಿ ಹಾಮೋನು ಗಳನ್ನು ಸ್ರವಿಸುತ್ತದೆ. ಥೈರಾಯ್ಡ್ ನಿಯಂತ್ರಣಕ್ಕಾಗಿ ಔಷಧಿ ಮತ್ತು ಕೆಲವು ವ್ಯಾಯಾಮಗಳ ಜೊತೆಯಲ್ಲಿ ಯೋಗವು ಪರ್ಯಾಯ ಚಿಕಿತ್ಸೆಯ ಒಂದು ಭಾಗವಾಗಿದೆ. ಥೈರಾಯ್ಡ್ ಕಾಯಿಲೆಗಳ ನಿರ್ವಹಣೆಯಲ್ಲಿ ಇದು ದೀರ್ಘಕಾಲೀನ ಪ್ರಯೋಜನವನ್ನು ಹೊಂದಿದೆ.
ಯೋಗಗಳಾವವು?: ಪ್ರಾರ್ಥನೆ, ಧ್ಯಾನ, ಕೆಲವು ಸೂಕ್ಷ್ಮ ವ್ಯಾಯಾಮಗಳು. ಓಂಕಾರ, ಜಾಲಂದರ ಬಂಧ, ಕಪಾಲಬಾತಿ ಕ್ರಿಯೆ, ಸೂರ್ಯ ನಮಸ್ಕಾರ (ನೆಕ್ ರೋಟೇಶನ್) ಕುತ್ತಿಗೆಯ ವ್ಯಾಯಾಮ ಮಾಡುವುದರಿಂದ ಥೈರಾಯ್ಡ್ ಗ್ರಂಥಿಯ ಕೆಲಸ ಕಾರ್ಯ ಸಮರ್ಪಕವಾಗಿ ನಿರ್ವಹಣೆಯಾಗುತ್ತದೆ.
ಪ್ರಮುಖ ಯೋಗಾಸನಗಳ ಪಟ್ಟಿ: ಅರ್ಧ ಚಕ್ರಾಸನ, ಮತ್ಸಾ್ಯಸನ, ಪರ್ಯಂಕಾಸನ, ಉಷ್ಮಾಸನ, ಸೇತುಬಂಧ ಸರ್ವಾಂಗಾಸನ, ಸರ್ವಾಂಗಾಸನ, ಹಲಾಸನ, ಭುಜಂಗಾಸನ ಸಿಂಹಾಸನ, ಸುಪ್ತ ವೀರಾಸನ, ಅರ್ಧಮತ್ಸೇಂದ್ರಾಸನ, ಧನುರಾಸನ ಊರ್ಧ್ವ ಧನುರಾಸನ, ಸಾಧ್ಯವಾದರೆ ಶಿರ್ಷಾಸನ ಇತ್ಯಾದಿ ಆಸನಗಳು ಮತ್ತು ಕೊನೆಯಲ್ಲಿ ಶವಾಸನ.
ಪ್ರಾಣಾಯಾಮಗಳು: ಭ್ರಾಮರಿ ಪ್ರಾಣಾಯಾಮ, ಉಜ್ಜಿಯೀ ಪ್ರಾಣಾಯಾಮ, ನಾಡೀ ಶುದ್ಧಿ ಪ್ರಾಣಾಯಾಮ, ಹೈಪೋಥೈರಾಯ್ಡ್ನ ಸಮಸ್ಯೆ ಇದ್ದವರು ಸೂರ್ಯ ಭೇದನ, ಭಸ್ತ್ರಿಕಾ ಪ್ರಾಣಾಯಾಮ, ಹೈಪರ್ ಥೈರಾಯ್ಡ್ ಸಮಸ್ಯೆ ಇದ್ದವರು, ಶೀತಲೀ ಸಿತ್ಕಾರಿ ಪ್ರಾಣಯಾಮ ಮತ್ತು ಉಸಿರನ್ನು ಗಮನಿಸುವ ಸರಳ ಧ್ಯಾನ ಮಾಡಿ (ಸ್ವಲ್ಪ ಹೊತ್ತು)
ಮುದ್ರೆಗಳು: ಪ್ರಾಣಮುದ್ರೆ, 10 ನಿಮಿಷ, ಶಂಖಮುದ್ರೆ (15 ನಿಮಿಷದಂತೆ 2 ಬಾರಿ, ಸೂರ್ಯಮುದ್ರೆ 20 ನಿಮಿಷ) ಜ್ಞಾನ ಮುದ್ರೆ 10 ರಿಂದ 20 ನಿಮಿಷ. ಶೂನ್ಯ ಮುದ್ರೆ 20 ನಿಮಿಷ.
ಬಣ್ಣಗಳ ಚಿಕಿತ್ಸೆ: ಕೆಂಪುಬಣ್ಣ, ಆರೆಂಜ್ ಬಣ್ಣ ಹಾಗೂ ಪ್ರಮುಖವಾಗಿ ನೀಲಿ ಬಣ್ಣಗಳನ್ನು ತಲಾ 10 ನಿಮಿಷ ನೋಡುತ್ತಿರಿ. ಬಣ್ಣಗಳನ್ನು ನೋಡಿದಾಗ ಕಣ್ಣು ಹೀರುತ್ತದೆ, ಚರ್ಮ ಹೀರುತ್ತದೆ, ಮನಸ್ಸು ಹೀರುತ್ತದೆ (ಹೀಲಿಂಗ್ಗೆ ಸಹಕಾರಿ) ಗ್ರಂಥಿಗಳ ಕಾರ್ಯನಿರ್ವಹಣೆಗೆ ಹಾಗೂ ಬಣ್ಣಗಳು ಮನಶ್ಶಾಂತಿಗೆ ಸಹಕಾರಿಯಾಗಿರುತ್ತದೆ. ಥೈರಾಯ್್ಡ ಸಮಸ್ಯೆ ಇದ್ದವರು ವೈದ್ಯರಿಂದ ಅಗತ್ಯದ ಉಪಚಾರವನ್ನು ಪಡೆಯಿರಿ. ಯೋಗವನ್ನು ಗುರುಮುಖೇನ ಕಲಿತು ಅಭ್ಯಾಸ ಮಾಡಿ.