ದೈಹಿಕ ಆರೋಗ್ಯ ವೃದ್ಧಿಗೆ ಯೋಗ ಅತಿ ಮುಖ್ಯ

22-pnp 2
ಪಾಂಡವಪುರದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮವನ್ನು ತಹಸೀಲ್ದಾರ್ ಎಸ್.ಸಂತೋಷ್ ಉದ್ಘಾಟಿಸಿದರು. ಡಾ.ಅರವಿಂದ್, ಡಾ.ಮಣಿಕರ್ಣಿಕ, ಜ್ಯೋತಿಲಕ್ಷ್ಮೀ ಬಾಬು, ಧನಂಜಯ ಇತರರು ಇದ್ದರು.
Published on

ಪಾಂಡವಪುರ: ಭೌದ್ಧಿಕ ಜ್ಞಾನ ಬೆಳವಣಿಗೆಗೆ ಶಿಕ್ಷಣ ಎಷ್ಟು ಮುಖ್ಯವೋ, ದೈಹಿಕ ಆರೋಗ್ಯ ವೃದ್ಧಿಗೆ ಯೋಗ ಅಷ್ಟೇ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಯೋಗದಲ್ಲಿ ತೊಡಗಿಕೊಳ್ಳಬೇಕು ಎಂದು ಪಟ್ಟಣದ ಉಪ ವಿಭಾಗೀಯ ಆಸ್ಪತ್ರೆ ಮುಖ್ಯ ಆಡಳಿತಾಧಿಕಾರಿ ಡಾ.ಸಿ.ಎ.ಅರವಿಂದ್ ಹೇಳಿದರು.

ಪಟ್ಟಣದ ವಿಜಯ ಶಿಕ್ಷಣ ಸಂಸ್ಥೆಯ ಡಾ.ಎಂ.ಎಸ್.ಕೃಷ್ಣಕುಮಾರ್ ಸಭಾಂಗಣದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ‘ಒನ್ ಅರ್ಥ್ ಒನ್ ಹೆಲ್ತ್’ ಹಾಗೂ ‘ಯೋಗದ ನಡೆ ಶಾಲೆಗಳ ಕಡೆ’ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ವಿಶ್ವದ ಅನೇಕ ರಾಷ್ಟ್ರಗಳು ಯೋಗದ ಕಡೆ ಮುಖ ಮಾಡಿವೆ. ಯೋಗದಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ವಿಶ್ವ ಸಮುದಾಯಕ್ಕೆ ಮನದಟ್ಟಾಗಿದೆ. ಹೀಗಾಗಿ ಯೋಗ ವಿಶ್ವವನ್ನು ಅವರಿಸಿಕೊಳ್ಳುತ್ತಿದೆ ಎಂದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಎನ್.ಕೆಂಪೇಗೌಡ ಮಾತನಾಡಿ, ದೈಹಿಕ ಶ್ರಮ ಇಲ್ಲದ ಕಾರಣ ಅನೇಕ ರೋಗಗಳು ಮನುಷ್ಯನನ್ನು ಆವರಿಸುತ್ತಿವೆ. ಯಾಂತ್ರಿಕ ಯುಗದಲ್ಲಿ ಮನುಷ್ಯ ಮಾಡಬೇಕಾದ ಎಲ್ಲ ಕೆಲಸವನ್ನು ಯಂತ್ರೋಪಕರಣಗಳೇ ಮಾಡುತ್ತಿದೆ. ಹೀಗಾಗಿ ಶ್ರಮ ಕಡಿಮೆಯಾಗಿದ್ದು, ಜಡತ್ವ ಹೆಚ್ಚಾಗುತ್ತಿದೆ. ಆರೋಗ್ಯವಂತರಾಗಿರಲು ಕನಿಷ್ಠ ಎರಡು ಗಂಟೆಯಾದರೂ ಶ್ರಮ ಪಡಬೇಕು. ಜೀವನ ಎಷ್ಟು ಇರುತ್ತೋ ಇಲ್ಲವೋ ಗೊತ್ತಿಲ್ಲ. ಮನುಷ್ಯ ಕುಳಿತಲ್ಲೇ, ನಿಂತಲ್ಲೇ ಸಾವು ಸಂಭವಿಸುತ್ತಿದೆ. ದೇಹದಲ್ಲಿ ಸಮತೋಲನ ರಕ್ತ ಸಂಚಾರಕ್ಕೆ ಯೋಗ ಬಹಳ ಮುಖ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಲಾ ಪರಿಸರ ಮತ್ತು ಯೋಗಕ್ಕೆ ಮಹತ್ವ ನೀಡಿ ಕೆಲಸ ಮಾಡುತ್ತಿರುವ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ತಹಸೀಲ್ದಾರ್ ಎಸ್.ಸಂತೋಷ್, ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮೀ ಬಾಬು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಂ.ಡಿ.ಕುಮಾರ್, ಡಾ.ಮಣಿಕರ್ಣಿಕ, ಶಿಕ್ಷಕರಾದ ಧನಂಜಯ, ಕೇಶವ, ಪತಂಜಲಿ ಸಮಿತಿಯ ಜಯರಾಂ, ಎಚ್.ಎನ್.ವಿಜಯಕುಮಾರ್, ಚಂದ್ರಶೇಖರಯ್ಯ, ಎಸ್.ಎ.ಮಲ್ಲೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net